ಸಮ್ಮೇಳನ ಸರ್ವಾಧ್ಯಕ್ಷರಿಗೆ ಗೌರವಪೂರ್ವಕ ಅಹ್ವಾನ
ತಾಳಿಕೋಟೆ:ಸೆ.25: ಅಕ್ಟೋಬರ್ 1 ರಂದು ತಾಳಿಕೋಟೆ ಮಹಾ ನಗರಿಯಲ್ಲಿ ಜರುಗುತ್ತಿರುವ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಸಾಹಿತಿ ನಿವೃತ್ತ ಪ್ರಾಚಾರ್ಯ ಡಾ.ಗುರುಪಾದಪ್ಪ ಘೀವಾರಿ ಅವರಿಗೆ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಂಗಳವಾರರಂದು ಸನ್ಮಾನಿಸಿ ಗೌರವಿಸಿ ಅಹ್ವಾನ ಪತ್ರಿಕೆಯವನ್ನು ನೀಡಲಾಯಿತು.
ಈ ಸಮಯದಲ್ಲಿ ಕಸಾಪ ಹಿರಿಯ ಸದಸ್ಯ ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರು ಮಾತನಾಡಿ ಐತಿಹಾಸಿಕ ತಾಳಿಕೋಟೆ ನಗರದಲ್ಲಿ ಅಕ್ಟೋಬರ್ 1 ರಂದು ನಡೆಯುತ್ತಿರುವ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವು ಅತ್ಯಂತ ವೈಭವಪೂರಕವಾಗಿ ಜರುಗಿಸಲು ತಾಲೂಕಿನ ಎಲ್ಲ ಜನರು ಮುಂದಾಗಿದ್ದಾರೆ ಈ ಒಂದು ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ಕನ್ನಡ ಸಾಹಿತ್ಯ ಕೊಡುಗೆ ನೀಡಿದಂತಹ ಮಹನೀಯರಾದ ಸಾಹಿತಿ ಡಾ.ಗುರುಪಾದಪ್ಪ ಘೀವಾರಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು ಸದರಿ ಸಮ್ಮೇಳನದಲ್ಲಿ ಸರ್ವಾಧ್ಯಕ್ಷ ಡಾ.ಗುರುಪಾದಪ್ಪ ಘೀವಾರಿ ಅವರು ಆ ಸ್ಥಾನವನ್ನು ವಹಿಸಿಕೊಂಡು ಸಮ್ಮೇಳನದ ಯಶಸ್ವಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಇನ್ನೋರ್ವ ಕಸಾಪ ತಾಲೂಕಾ ಗೌರವಾಧ್ಯಕ್ಷ ಎಚ್.ಎಸ್.ಪಾಟೀಲ ಅವರು ಮಾತನಾಡಿ ತಾಳಿಕೋಟೆ ಮಹಾ ನಗರವು ಕನ್ನಡ ಸಾಹಿತ್ಯದ ಮೂಲಬೇರುವೆಂಬಂತೆ ಅನೇಕ ಕೊಡುಗೆಗಳನ್ನು ನೀಡುತ್ತಾ ಬಂದಿದೆ ಈ ಭಾರಿ ತಾಳಿಕೋಟೆ ತಾಲೂಕಾ ಕೇಂದ್ರವಾಗಿ ಅಸ್ಥಿತ್ವಕ್ಕೆ ಬಂದ ನಂತರ ಪ್ರಥಮ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ ಈ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಅತ್ಯಂತ ಕ್ರೀಯಾಶೀಲರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ನಿವೃತ್ತ ಪ್ರಾಚಾರ್ಯ ಡಾ.ಗುರುಪಾದಪ್ಪ ಘೀವಾರಿ ಅವರನ್ನು ಆಯ್ಕೆ ಮಾಡಿರುವದು ತಾಲೂಕಿನ ಎಲ್ಲ ಜನರಲ್ಲಿ ಸಂತಸದ ಹಿನಲು ಮೂಡಿದೆ ಸದರಿ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನವನ್ನು ಘೀವಾರಿ ಅವರು ಅಲಂಕರಿಸಿ ಸಮ್ಮೇಳನದ ಯಶಸ್ವಿಗೆ ಸಹಕರಿಸಲಿದ್ದಾರೆಂದರು.
ಕಸಾಪ ತಾಲೂಕಾ ಅಧ್ಯಕ್ಷ ಆರ್.ಎಲ್.ಕೊಪ್ಪದ ಅವರು ಸಮ್ಮೇಳನದ ಸರ್ವಾಧ್ಯಕ್ಷ ಡಾ.ಗುರುಪಾದಪ್ಪ ಘೀವಾರಿ ಅವರನ್ನು ಸನ್ಮಾನಿಸಿ ಗೌರವಿಸಿ ಆಮಂತ್ರಣವನ್ನು ನೀಡಿ ಅಹ್ವಾನಿಸಿದರು.
ಈ ಸಮಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರೋ.ಆಯ್.ಆರ್.ಜಾಲವಾದಿ, ಡಾ.ನಜೀರ ಕೋಳ್ಯಾಳ, ಎಸ್.ವ್ಹಿ.ಜಾಮಗೊಂಡಿ, ಡೋಣಿ, ಸಿದ್ದು ಶಿರಶಿ, ಬಿ.ಆರ್.ಪೋಲೀಸ್‍ಪಾಟೀಲ, ಎಂ.ಎಸ್.ರಾಯಗೊಂಡ, ಪ್ರಭುಗೌಡ ಮದರಕಲ್ಲ, ಜೈಭೀಮ ಮುತ್ತಗಿ, ಪ್ರಭುಗೌಡ ಚೌದ್ರಿ, ಅಂಬಾಜಿ ಘೋರ್ಪಡೆ ಮೊದಲಾದವರು ಉಪಸ್ಥಿತರಿದ್ದರು.