ನಾನು ಸಿದ್ದರಾಮಯ್ಯ ಪರವಾಗಿದ್ದೇನೆ : ಯಶವಂತರಾಯಗೌಡ
ಇಂಡಿ :ಸೆ.25: ಪ್ರಾಸಿಕ್ಯೂಷನ್ ಕುರಿತು ಹೈಕೋರ್ಟ ಪರವಾಗಿ ತೀರ್ಪು ನೀಡಿದ್ದರೂ ಕೂಡ ನಾವು ನ್ಯಾಯಾಲಯಕ್ಕೆ ಅಪೀಲು ಮಾಡುತ್ತಿದ್ದೇವೆ. ಮತ್ತು ನಾನು ಅಲ್ಲದೆ ಕರ್ನಾಟಕದ 136 ಶಾಸಕರು ಸಿದ್ದರಾಮಯ್ಯನವರ ಪರವಾಗಿ ನಿಲ್ಲುತ್ತೇವೆ ಎಂದು ಯಶವಂತರಾಯಗೌಡರು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರಕಾರ ಎಲ್ಲಿ ಬಿಜೆಪಿಯೇತರ ಸರಕಾರ ಇದೆ ಆ ಮುಖ್ಯಮಂತ್ರಿಗಳಿಗೆ ಕಿರುಕುಳ ನೀಡುತ್ತಿದೆ. ಇಡಿ,ಐಟಿ, ಸಿಬಿಐ ದುರ್ಬಳಕೆ ಮಾಡಿಕೊಂಡು ವಿರೋಧಿ ಚುನಾಯಿತ ಪ್ರತಿನಿಧಿಗಳನ್ನು ಹತ್ತಿಕ್ಕುವ ಹುನ್ನಾರ ಮಾಡುತ್ತಿದೆ ಎಂದರು.
ಬಿಜೆಪಿ ಮೊದಲಿನಿಂದಲೂ ಕಾಂಗ್ರೆಸ್ ಸರಕಾರ ಅಭದ್ರ ಗೊಳಿಸುವ ಹುನ್ನಾರ ಮಾಡುತ್ತಿದೆ. ರಾಜ್ಯದ ಜನರು ಬಿಜೆಪಿಗೆ ಬಹುಮತ ನೀಡುತ್ತಿಲ್ಲ. ಹೀಗಾಗಿ ಅಪರೇಷನ್ ಕಮಲ ಮಾಡುವ ಮೂಲಕ ರಾಜ್ಯದ ಕಾಂಗ್ರೆಸ್ ಸರಕಾರ ಕೆಡವಲು ಪ್ರಯತ್ನಿಸುತ್ತಿದೆ. ಆದರೂ ರಾಜ್ಯದ ಯಾವೋಬ್ಬ ಶಾಸಕರು ಆಮಿಷಕ್ಕೆ ಬಲಿಯಾಗುತ್ತಿಲ್ಲ. ಹೀಗಾಗಿ ರಾಜ್ಯಪಾಲದ ದುರ್ಬಳಕೆ ಕೇಂದ್ರ ಸರಕಾರ ಮಾಡಿಕೊಳ್ಳುತ್ತಿದೆ ಎಂದರು.
1983 ರಲ್ಲಿ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಇಲ್ಲಿಯ ವರೆಗೆ ಸಿದ್ದರಾಮಯ್ಯ ಕಪ್ಪು ಚುಕ್ಕೆ ಇಲ್ಲದ ರಾಜಕೀಯ ಮಾಡಿದ್ದಾರೆ. ಸಚ್ಛಾರಿತ್ರತೆಯ, ಬದ್ಧತೆಯ ಮತ್ತು ಜನಮಾನಸದಲ್ಲಿ ಛಾಪು ಮೂಡಿಸಿದ್ದಾರೆ. ಅವರ ತೋಜೊವಧೆ ಬಿಜೆಪಿ ಮಾಡುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷ, ಪಕ್ಷದ ಕೇಂದ್ರ ನಾಯಕರು, ಎಲ್ಲ ಶಾಸಕರು, ಮಂತ್ರಿಮಂಡಳ ಸಿದ್ದರಾಮಯ್ಯನವರ ಪರವಾಗಿದೆ ಎಂದರು.
ರಾಜ್ಯಪಾಲರ ಕಚೇರಿ ಬಿಜೆಪಿ ಕೇಂದ್ರವಾಗಿದೆ. ಸಂವಿಧಾನದ ದುರ್ಭಳಕೆ ಯಾಗುತ್ತಿದೆ. ಪ್ರಜಾಪ್ರಭುತ್ವ ಸರಕಾರಕ್ಕೆ ದಕ್ಕೆ ತರುವ ಕಪ್ಪು ಚುಕ್ಕೆ ತರುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ ಎಂದರು.
ನಾವೆಲ್ಲರೂ ಸಿದ್ದರಾಮಯ್ಯನವರ ಜೊತೆ ನಿಂತು ಹೋರಾಡುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಇಲಿಯಾಸ ಬೋರಾಮಣಿ, ಜಟ್ಟೆಪ್ಪ ರವಳಿ, ಭೀಮಣ್ಣ ಕವಲಗಿ, ಜಾವೇದ ಮೋಮಿನ, ಪ್ರಶಾಂತ ಕಾಳೆ, ಷಹನಶಹಾ ಜಹಾಗೀರದಾರ ಮತ್ತಿತರಿದ್ದರು.