ಆರ್.ಜೆ ಕಾಲೇಜಿನಲ್ಲಿ 55ನೇ ಎನ್.ಎಸ್.ಎಸ್ ಸಂಸ್ಥಾಪನಾ ದಿನಾಚರಣೆ
ಕಲಬುರಗಿ:ಸೆ.25: ನಗರದ ಸರದಾರ ವಲ್ಲಭಭಾಯಿ ಪಟೇಲ್ ಎಜ್ಯುಕೇಷನ್ ಟ್ರಸ್ಟ್ ಸಂಚಾಲಿತ ರಮಾಬಾಯಿ ಜಹಾಗೀರದಾರ್ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಓSS) ಘಟಕದ ವತಿಯಿಂದ 55ನೇ ಸಂಸ್ಥಾಪನಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಉಧ್ಘಾಟನೆಯನ್ನು ಮುಖ್ಯತಿಥಿಗಳಾಗಿ ಆಗಮಿಸಿದ ಸರಕಾರಿ ಬಾಲಕಿಯರ ಪ.ಪೂ ಕಾಲೇಜಿನ ಕನ್ನಡ ಉಪನ್ಯಾಸಕರು ಶ್ರೀ. ವಿಜಯಕುಮಾರ್ ರೋಣದ್ ಅವರು ಸಸಿಗೆ ನೀರೆರೆಯುವುದರ ಮುಖಾಂತರ ಚಾಲನೆ ನೀಡಿದರು.
ರಾಷ್ಟ್ರೀಯ ಸೇವಾ ಯೋಜನೆ ಕುರಿತು ಸ್ವಾಭಿಮಾನ, ಸ್ವಾವಲಂಬನೆ ಬದುಕು, ಶಿಸ್ತು, ಸಮಯ ಪಾಲನೆ ಅಧ್ಯಾಯನ ಮೌಲ್ಯ ಶಿಕ್ಷಣ, ಸಾಮಾಜಿಕ ನಿಷ್ಟೆ, ಶ್ರಮ ಸಂಸ್ಕøತಿ ವಿದ್ಯಾರ್ಥಿಗಳ ಬದುಕಿಗೆ ಪೂರಕವಾಗಿದ್ದು ಇದನ್ನು ಅರಿಯಬೇಕು. ಸಾಮಾಜಿಕ ಚಿಂತನೆ ಆಗಬೇಕೇ ಹೊರತು ವ್ಯಕ್ತಿಯ ಚಿಂತನೆ ಆಗಬಾರದು. ರಾಷ್ಟ್ರದ ಘನತೆ ಗೌರವ ಹೆಚ್ಚಿಸಬೇಕು. ಮಡಿಕೆ ಮಾಡುವದೇ ಮಣ್ಣೇ ಮೊದಲು ಎನ್ನುವ ಸೂಕ್ತಿಯಂತೆ ರಾಷ್ಟ್ರ ಮಾತೆಯ ಹಿರಿಯ ಮಗಳೇ ಕನ್ನಡ ಎನ್ನುವ ಅಭಿಮಾನದ ಮಾತು ಮಕ್ಕಳಿಗೆ ಜ್ಞಾನದ ಸವಿಯನ್ನು ಹೇಳಿದರು.
ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಡಾ|| ಭುರ್ಲಿ ಪ್ರಹ್ಲಾದ ಅವರು ವಿದ್ಯಾರ್ಥಿಗಳಿಗೆ ಪ್ರಶ್ನಿಸುತ್ತಾ ಜ್ಞಾನದ ಅರಿವು ಸಂಬಂಧಗಳ ಮಮಕಾರ ವಿದ್ಯಾರ್ಥಿಗಳಲ್ಲಿ ಇದ್ದರೆ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಗಳಾದ ಶ್ರೀ ಪ್ರಕಾಶ ಚವ್ಹಾಣ ಅವರು ಘಟಕದ ಸ್ಥಾಪನೆ, ಧ್ಯೇಯ, ಉದ್ದೇಶ, ಯೋಜನೆಗಳು ಕುರಿತು ಮುಂದಿನ ಕಾರ್ಯಗಳನ್ನು ರೂಪಿಸುವ ವಿದ್ಯಾರ್ಥಿ ಶಿಭಿರಾರ್ತಿಗಳಲ್ಲಿ ವಿಚಾರಗಳನ್ನು ತಿಳಿಸಿದರು.
ಪ್ರಾರ್ಥನಾ ಗೀತೆಯನ್ನು ಕುಮಾರಿ. ಸಾರಿಕಾ ಹಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಮಳೇಂದ್ರ ಹಿರೇಮಠ ಅವರು ನಡೆಸಿಕೊಟ್ಟರು. ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂಧಿ ಉಪಸ್ಥಿತರಿದ್ದರು.