ಭೂಮಾಪಿಯಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.16:ಭೂಮಾಪಿಯಾ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ನೇತೃತ್ವದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ಮೆgವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಳೆದ ಏಳು ವರ್ಷಗಳಿಂದ ಜಿಲ್ಲೆಯ ನೋಂದಣಾಧಿಕಾರಿಗಳು ವಿಜಯಪುರ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅವರು ಭೂ ಕಬಳಿಕೆ ಪ್ರಕರಣಗಳಿಗೆ ಕುಮಕ್ಕು ನೀಡುತ್ತಿದ್ದಾರೆ. ಅವರ ಜೊತೆ ಹಲವಾರು ಜನ ಕೈಜೋಡಿಸಿ ಅಮಾಯಕ ಬಡಜನರ ನಕಲಿ ದಾಖಲೆ ಸೃಷ್ಟಿಸಿ ಕೊಳ್ಳೆ ಹೊಡೆಯುತ್ತಿದ್ದಾರೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳು ಗಂಭೀರವಾಗಿ ಈ ಪ್ರಕರಣವನ್ನು ಪರಿಗಣಿಸಬೇಕು. ಇದಕ್ಕೆ ತಾಲೂಕು ಮತ್ತು ಜಿಲ್ಲೆಯಲ್ಲಿ ವಿಶೇಷ ತಂಡವನ್ನು ರಚನೆ ಮಾಡಿ ತಕ್ಷಣದಿಂದ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿ ಶನಿವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಅಕ್ರಮವಾಗಿ ನಕಲಿ ಭೂ-ದಾಖಲೆ ಸೃಷ್ಟಿ ಮಾಡಿ ಜನರನ್ನು ವಂಚಿಸುತ್ತಿರುವ ದೊಡ್ಡ ಪ್ರಮಾಣದಲ್ಲಿ ಜಾಲ ಬೀಡು ಬಿಟ್ಟಿದ್ದು, ಇದನ್ನು ಜಿಲ್ಲಾಡಳಿತ ತಕ್ಷಣವೇ ಮಟ್ಟ ಹಾಕಬೇಕು. ಇದರಲ್ಲಿ ನೂರಾರು ಜನ ತಮ್ಮ ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ. ಇವತ್ತಿನ ದಿನಮಾನದಲ್ಲಿ ಇದರ ಮೊತ್ತ ನೂರಾರು ಕೋಟಿ ರೂ. ಆಗಿದು, ್ದಇದೊಂದು ಗಂಭೀರ ಪ್ರಕರಣವಾಗಿದೆ. ಇದನ್ನು ತಕ್ಷಣವೇ ಮಟ್ಟ ಹಾಕಬೇಕು. ಒಂದು ವೇಳೆ ಇದಕ್ಕೆ ಸರ್ಕಾರ ಮತ್ತು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಮಾಜಿ ಸಚಿವ ಪಟ್ಟಣಶೆಟ್ಟಿ ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಕೀಲರಾದ ನಾಗರಾಜ ಲಂಬು, ಪ್ರಕಾಶ ಮಿರ್ಜಿ, ಗೋಪಾಲ ಘಟಕಾಂಬಳೆ, ಅಡಿವೆಪ್ಪ ಸಾಲಗಲ್ಲ, ಭೀಮಾಶಂಕರ ಹದನೂರು, ಈರಣ್ಣ ಪಟ್ಟಣಶೆಟ್ಟಿ, ರಮೇಶ ರೇμÉ್ಮ, ರಾಜು ಹಿರೇಮಠ, ಪರಶುರಾಮ ಹೊಸಮನಿ, ಮಹೇಶ ಬಿದನೂರು, ಬಾಬು ಏಳಗಂಟಿ, ಸೈಯದ್ ನಿಲೋನಿ, ಬಸವರಾಜ ಹಳ್ಳಿ, ವೈದ್ಯನಾಥ ಬೂಬಶೆಟ್ಟಿ, ಪ್ರವೀಣ ವಾರದ, ಸಾಗರ ಅಡಿಕೆ, ಶ್ರೀಧರ ಪವಾರ, ಸಂತೋಷ ಜಾಧವ, ಬಾಬು ಜಗದಾಳೆ, ಬಸವರಾಜ ತನುμÁಳ, ಸಿದ್ದು ಮಲ್ಲಿಕಾರ್ಜುನಮಠ, ವಿಜಯಕುಮಾರ ಹೂವಳ್ಳಿ, ಗುರು ಗೋಲಗೇರಿ, ಶಿವಾನಂದ ಪಾಟೀಲ, ಶಿವು ಕಾಳಗಿ, ಕಲ್ಲು ರೂಗಿ, ಶ್ರೀಕಾಂತ ಶಿಂಧೆ, ವಿನಾಯಕ ದಹಿಂಡೆ, ಕಲ್ಲುಗೌಡ ಹರ್ನಾಲ, ಸದಾಶಿವ ಚಲವಾದಿ, ಮಹೇಶ ಕುಂಬಾರ, ಪ್ರಫುಲ್ ಪವರ್, ರಾಘವೇಂದ್ರ ಕಾಪ್ಸೆ, ಶಾಂತು ಕಂಬಾರ, ಅನಿಲ ಉಪಾರ, ಆನಂದ ಮುಚ್ಚಂಡಿ, ಗಣೇಶ ಅಜರಿ, ನಿಖಿಲ್, ರುದ್ರಗೌಡ ಪಾಟೀಲ, ರಮೇಶ ಕೊಡಗನೂರ, ರವಿ ಬಾಗಲಕೋಟೆ, ಸತೀಶ ಪಾಟೀಲ, ಜಗದೀಶ ಮುಚ್ಚಂಡಿ ಇದ್ದರು.