ಹಿರಿಯರನ್ನು ಗೌರವಿಸುವ ಸಂಸ್ಕøತಿ, ಪರಂಪರೆ ಬೆಳೆಯಲಿ
ಕಲಬುರಗಿ:ಜೂ.15: ಸಮಾಜಕ್ಕೆ ಹಿರಿಯರು ಭಾರವಲ್ಲ. ಅವರು ತಮ್ಮಲ್ಲಿರುವ ಹಿರಿತನದ ಜ್ಞಾನ, ಅನುಭವವನ್ನು ಸಮಾಜಕ್ಕೆ ನೀಡಬೇಕು. ಕಿರಿಯರು ಅವರ ಅನುಭವದ ಮಾತುಗಳನ್ನು ಆಲಿಸಿ ಮುನ್ನಡೆಯಬೇಕು. ಮಕ್ಕಳಲ್ಲಿ ಬಾಲ್ಯದಿಂದಲೇ ಗುರು-ಹಿರಿಯರನ್ನು ಗೌರವಿಸುವ ಸಂಸ್ಕøತಿ, ಪರಂಪರೆÀ ಬೆಳೆಸಬೇಕಾಗಿದೆ. ಎಂತಹ ಸಂದರ್ಭದಲ್ಲಿಯೂ ಹಿರಿಯರನ್ನು ನಿಂದನೆ ಮಾಡುವುದಾಗಲಿ, ಮನ ನೋಯಿಸುವುದು, ತೊಂದರೆ ನೀಡುವ ಕೆಲಸ ಮಾಡಬಾರದು ಎಂದು ಸಾಮಾಜಿಕ ಚಿಂತಕ ಡಾ.ಸುನೀಲಕುಮಾರ ಎಚ್.ವಂಟಿ ಯುವಕರಿಗೆ ಕರೆ ನೀಡಿದರು.
ನಗರದ ಜಗತ ಬಡಾವಣೆಯ ಶ್ರೀ ಮೈಲಾರಲಿಂಗೇಶ್ವರ ಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ ಮತ್ತು ‘ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ’ ಇವುಗಳ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ‘ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಉಪನ್ಯಾಸಕ ಹಾಗೂ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ ಮಾತನಾಡುತ್ತಾ, ವಯೋವೃದ್ಧರನ್ನು ವೃದ್ಧಾಶ್ರಮಕ್ಕೆ ನೂಕುವ ನೀಚ ಬುದ್ಧಿ ಬೇಡ. ಅವರ ಇಳಿವಯಸ್ಸಿನಲ್ಲಿ ಅವರಿಗೆ ಉತ್ತಮ ಆರೈಕೆ, ಆಶ್ರಯ ನೀಡಬೇಕು. ಪಾಶ್ಯಾತ್ಯ ಸಂಸ್ಕøತಿಯ ಪ್ರಭಾವದಿಂದಾಗಿ ಹಿರಿಯರಿಗೆ ಗೌರವ ನೀಡುವ ಪದ್ಧತಿ ಕಡಿಮೆಯಾಗುತ್ತಿರುವದು ವಿಷಾದನೀಯ ಸಂಗತಿ. ವೃದ್ಧಾಶ್ರಮಗಳು ಇದರ ಸಂಕೇತಗಳಾಗಿವೆ. ಸದೃಢ ಸಮಾಜ ನಿರ್ಮಾಣಕ್ಕೆ ಹಿರಿಯರ ಸಲಹೆ-ಮಾರ್ಗದರ್ಶನ ಅವಶ್ಯಕ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಸಿದ್ದಣ್ಣ ಎಸ್.ಹೂಗಾರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ, ಸಮಾಜ ಸೇವಕರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಅಸ್ಲಾಂ ಶೇಖ್, ಬಡಾವಣೆಯ ಪ್ರಮುಖರು ಹಾಗೂ ಹಿರಿಯ ಮಹಿಳೆಯರಾದ ಶೈಲಜಾ ಎಸ್.ತೋಳನೂರ, ಜಗದೇವಿ ತೋಳನೂರ, ಸುಲೋಚನಾ ಎನ್.ಬೋರವತ್, ಪ್ರಭಾ ಗಾಜರೆ, ಹೈಯತ್‍ಬೀ ಜಮಾದಾರ, ಬಸಮ್ಮ ಹೊನ್ನಕಿರಣಗಿ, ಶರಣಮ್ಮ ಗಾಂಜಿ, ವಿಜಯಲಕ್ಷ್ಮೀ ನರಿಬೋಳ, ರತ್ನಾಬಾಯಿ ಮಾಗಶೆಟ್ಟಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.