ಭರತ ಭೂಮಿಯಲ್ಲಿ ಜನಿಸಿರುವುದೆ ಸಾರ್ಥಕ: ಶ್ರೀ ಶ್ರೀಅಕ್ಷೋಭ್ಯರಾಮಪ್ರಿಯ ತೀರ್ಥರು
ಕಲಬುರಗಿ:ಜೂ.15:ಭಾರತದಲ್ಲಿ ಹುಟ್ಟಿರುವುದೇ ನಮ್ಮ ಪುಣ್ಯ, ಜನ್ಮ ಸಾರ್ಥಕ ಜಗತ್ತಿನ ಎಲ್ಲಾ ಜೀವಿಗಳ ಒಳಿತನ್ನು ಬಯಸುವ ಹಾಗೂ ಎಲ್ಲರನ್ನೂ ಅಣ್ಣ-ತಮ್ಮಂದಿರೆಂದು ನೋಡುವ ಶ್ರೇಷ್ಠ ಪರಂಪರೆ ಭಾರತೀಯರದ್ದು, ಇಂತಹ ಶ್ರೇಷ್ಠ ಋಷಿಮುನಿಗಳ ಪರಂಪರೆಯಲ್ಲಿ ಜನಿಸಿರುವುದೇ ನಮ್ಮ ಸೌಭಾಗ್ಯ, ಪ್ರಾಚೀನ ವೇದ, ವೈದಿಕ ಶಾಖೆಗಳನ್ನು ಬೆಳೆಸಿದ ಅನೇಕ ಋಷಿಮುನಿಗಳು ನಮ್ಮ ಪರಂಪರೆಯಲ್ಲಿ ಆಗಿ ಹೋಗಿದ್ದಾರೆ ನಮ್ಮ ಧನ್ಯತೆ ಇಂತಹ ದೃಷ್ಟಾರರಾದಂತಹ ಋಷಿಮುನಿಗಳ ಪರಂಪರೆಗೆ ಸೇರಿದವರು ಎಂದು ಬಾಳಗಾರು ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀಅಕ್ಷೋಭ್ಯರಾಮಪ್ರಿಯ ತೀರ್ಥ ಶ್ರೀಪಾದಂಗಳವರು ಮಾತನಾಡಿದರು.
ಕಲಬುರಗಿ ನಗರದ ಸಂಗಮೇಶ್ವರ ಬಡಾವಣೆಯಲ್ಲಿರುವ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಆಯೋಜಿಸುತ್ತಾ ಭಕ್ತರು ಆಯೋಜಿಸಿದ್ದ ಪಾದಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಗವಂತನಾದ ಶ್ರೀ ಸೂರ್ಯನಾರಾಯಣ ಮತ್ತು ಮಹರ್ಷಿಗಳಿಗೆ ಮಂಗಳಾರತಿಗೈದು ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಶ್ರೀ ಪಾದಂಗಳವರು ಮಾನವರಾದ ನಾವುಗಳು ಕಷ್ಟಗಳಿಗೆ ಹತ್ತಿರವೇ ಅನುಭವಿಸಿ ಸಹಿಸಿಕೊಳ್ಳಬೇಕು ನಮ್ಮ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟು ದೇಹ ಮತ್ತು ಮನಸ್ಸನ್ನು ಭಗವಂತನ ಸೇವೆಯಲ್ಲಿ ತೊಡಗಿಸಬೇಕು. ಭಗವಂತನು ಋಷಿಗಳ ಗುರುಗಳ ಹಾಗೂ ತಂದೆ ತಾಯಿಗಳ ರೂಪದಲ್ಲಿ ಅನುಗ್ರಹಿಸುತ್ತಾನೆ ಶ್ರೀರಾಮ ಶ್ರೀ ಕೃಷ್ಣ ಪರಮಾತ್ಮನ ಗುಣಗಳನ್ನು ರಾಮಾಯಣ ಮಹಾಭಾರತ ಹಾಗೂ ತತ್ಪುಜ್ಞಾನವನ್ನು ಶ್ರವಣ ಮಾಡಬೇಕು ಎಂದು ಆಶೀರ್ವಚನ ನೀಡಿದರು.
ಶ್ರೀಯಾಜ್ಞವಲ್ಕ್ಯ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀಮಲ್ಹಾರಾವ ಕುಲಕರ್ಣಿ ಗಾರಂಪಳ್ಳಿ, ಹಿರಿಯರಾದ ಚಂದ್ರಕಾಂತ ಗದಾರ್, ಶಾಮಾಚಾರ್ಯ ಬೈಚಬಾಳ್, ಅಶೋಕ್ ಮಳ್ಳಿ, ಭೀಮರಾವ್ ಕುಲಕರ್ಣಿ, ವೆಂಕಟೇಶ್ ಕುಲಕರ್ಣಿ, ಶಾಮಾಚಾರ್ಯ ಜೋಶಿ ವನದುರ್ಗ, ಸುಧೀರ್ ಕುಲಕರ್ಣಿ, ಶ್ರೀರಾಮಾಚಾರ್ಯ ಮಂಜುನಾಥ್ ಕುಲಕರ್ಣಿ, ಶ್ರೀಧರ್ ಕುಲಕರ್ಣಿ, ವಿನುತ ಜೋಶಿ, ಮಾಥಾರ್ಂಡ ಹೇಮನೂರ್, ವಾಸುದೇವರಾವ ಸಿಂಧಗೇರಿ, ಅಶ್ವಥ್ ಜೋಶಿ, ದತ್ತಾತ್ರೆಯ ಸಬ್ನವಿಸ್, ಅವಧೂತ ಕುಲಕರ್ಣಿ ಹಾಗೂ ಮೈತ್ರಿ ಭಜನಾ ಮಂಡಳಿಯ ಮಾತೆಯರು ಇದ್ದರು.