ಹಿಂದೂ ಜಾಗೃತಿ ಸೇನೆ ಮುಖಂಡನಿಗೆ ಜೀವ ಬೆದರಿಕೆ: ರಕ್ಷಣೆಗೆ ಆಗ್ರಹಿಸಿ ಪ್ರತಿಭಟನೆ
ಕಲಬುರಗಿ,ಜೂ.15- ನಗರದ ಚಿಂಚೋಳಿ ಕ್ರಾಸ್ ಬಳಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತೀರುವ ವಾಹನ ತಡೆದ ಕಾರಣಕ್ಕೆ ಹಿಂದೂ ಜಾಗೃತಿ ಸೇನೆ ಜಿಲ್ಲಾ ಅಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ ಅವರಿಗೆ ಜೀವಬೆದರಿಕೆ ಹಾಕಿರುವ ಅನ್ಯಕೋಮಿನ ಯುವಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಸೂಕ್ತ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಜಿಲ್ಲಾ ಪೊಲೀಶ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ಕೈಗೊಂಡು ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸುನಿಲ ಶಿರ್ಕೆ, ಸಂತೋಷ ಸಾನಾವಗೇ, ಸುನೀಲ ರಾಠೋಡ, ಸಿದ್ದು ಕಂದಗಲ, ದಶರಥ ಇಂಗೋಳಿ, ರಾಜು ಕಮಲಾಪುರೆ, ಪ್ರಕಾಶ ವಾಘಮೋರೆ, ರಾಜು ಸ್ವಾಮಿ, ಚೇತನ ಪಾಟೀಲ ಸೇರಿದಂತೆ ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರು ಭಾಗವಹಿಸಿದ್ದರು.