75.13 ಲಕ್ಷ ಮೊತ್ತದ ಸ್ವತ್ತು ಜಪ್ತಿ: 36 ಜನರ ಬಂಧನ
ಬೀದರ್,ಜೂ.15-ಜಿಲ್ಲೆಯ 8 ಪೊಲೀಸ್ ಠಾಣೆಗಳಲ್ಲಿ ದಾಖಲಾದ 30 ಪ್ರಕರಣಗಳನ್ನು ಬೇಧಿಸಿ 36 ಜನರನ್ನು ಬಂಧಿಸಿ 75,13,330 ರೂ.ಮೊತ್ತದ ಸ್ವತ್ತನ್ನು ಜಪ್ತಿ ಮಾಡಲಾಗಿದೆ ಎಂದು ಎಸ್‍ಪಿ ಚೆನ್ನಬಸವಣ್ಣ ಲಂಗೋಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಸುಲಿಗೆ, ಬಂಗಾರ, 15 ಬೆಳ್ಳಿ, ನಗದು ಹಣ ಕಳವು, 8 ಬೈಕ್, ವಾಹನ ಕಳವು, 1 ಪಂಪ್ ಸೆಟ್ ಕಳವು, 3 ಸೆಂಟ್ರಿಂಗ್ ಪ್ಲೇಟ್ ಕಳವು, 1 ಪ್ರಿಂಟ್ ಸೂಟ್ ಕಳವು ಹಾಗೂ ಸ್ಪೀಕರ್, ಮೈಕ್, ಸೌಂಡ್ ಮಿಕ್ಸರ್ ಕಳವು ಪ್ರಕರಣವನ್ನು ಬೇಧಿಸಿ 26773000 ರೂ.ಮೌಲ್ಯದ 495 ಗ್ರಾಂ.ಬಂಗಾರ, 18600 ರೂ.ಮೌಲ್ಯದ 330 ಗ್ರಾಂ.ಬೆಳ್ಳಿ, 34400 ನಗದು, 8000 ರೂ.ಮೌಲ್ಯದ ಮೊಬೈಲ್, 2470000 ರೂ.ಮೌಲ್ಯದ 10 ಬೈಕ್ ಮತ್ತು 2 ನಾಲ್ಕು ಚಕ್ರದ ವಾಹನ, 210000 ರೂ.ಮೌಲ್ಯದ 350 ಸೆಂಟ್ರಿಂಗ್ ಪ್ಲೇಟ್, 1995000 ರೂ.ಮೌಲ್ಯದ 1850 ಜೊತೆ ಪ್ರಿಂಟ್ ಸೂಟ್ ಬಟ್ಟೆ, 42000 ರೂ.ಮೌಲ್ಯದ 2 ಪಂಪ್‍ಸೆಟ್, 58000 ರೂ.ಮೌಲ್ಯದ ಮೈಕ್‍ಸೆಟ್, ಸ್ಪೀಕರ್, ಸೌಂಡ್ ಮಿಕ್ಸರ್ ಸೇರಿದಂತೆ 75.13 ಲಕ್ಷ ಮೊತ್ತದ ವಸ್ತುಗಳನ್ನು ಜಪ್ತಿ ಮಾಡಿ 36 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.