ಕಾರ್ಮಿಕ ಪದ್ಧತಿ ಮಕ್ಕಳ ಬಾಲ್ಯ, ಘನತೆಯನ್ನು ಕಸಿದುಕೊಳ್ಳುತ್ತದೆ
ಸೈದಾಪುರ:ಜೂ.15:ಮಕ್ಕಳ ಬಾಲ್ಯ, ಅವರ ಸಾಮಥ್ರ್ಯ ಮತ್ತು ಘನತೆಯನ್ನು ಕಸಿದುಕೊಳ್ಳುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಾನಿಕಾರಕವಾದ ಕೆಲಸ ಬಾಲ ಕಾರ್ಮಿಕ ಪದ್ಧತಿಯಾಗಿದೆ ಎಂದು ಶ್ರೀ ಬಾಲಾಜಿ ಕಾಲೇಜಿನ ಪ್ರೋ. ಕಿಶನ್ ರಾಠೋಡ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಬಾಲಾಜಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವಬಾಲ ಕಾರ್ಮಿಕರ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬಡತನವು ಬಾಲಕಾರ್ಮಿಕತೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಮಕ್ಕಳು ತಮ್ಮ ಶಾಲೆಯನ್ನು ತೊರೆಯಲು ಮತ್ತು ತಮ್ಮ ಜೀವನೋಪಾಯಕ್ಕಾಗಿ ತಮ್ಮ ಪೆÇೀಷಕರನ್ನು ಬೆಂಬಲಿಸಲು ಕನಿಷ್ಠ ಉದ್ಯೋಗಗಳನ್ನು ಆರಿಸಿಕೊಳ್ಳುವಂತೆ ಒತ್ತಾಯಿಸಲಾಗುತ್ತದೆ. ಇದಲ್ಲದೆ, ಕೆಲವರು ಸಂಘಟಿತ ಅಪರಾಧ ದಂಧೆಗಳಿಂದ ಬಲವಂತವಾಗಿ ಬಾಲಕಾರ್ಮಿಕರನ್ನಾಗಿಸುತ್ತಾರೆ. ಆದ್ದರಿಂದ ಪೋಷಕರುತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ವಿದ್ಯೆಯನ್ನು ಕೊಡಿಸಬೇಕು ಎಂದು ಕಿವಿ ಮಾತು ಹೇಳಿದರು.
ಗುರುಮಠಕಲ್ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೀಮಣ್ಣ ಮಡಿವಾಳಕರ್ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿ ಸಮಾಜದ ಒಂದು ಕೆಟ್ಟ ಪದ್ಧತಿಯಾಗಿದೆ. ಮಕ್ಕಳ ಖುಷಿಯನ್ನೆ ಕಸಿದುಕೊಳ್ಳುತ್ತದೆ. ಇದರಿಂದ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಲು ಸಾದ್ಯವಾಗುವುದಿಲ್ಲ. ಬಾಲ ಕಾರ್ಮಿಕ ನಿರ್ಮೂಲನೆ ಇರುವ ಸಹಾಯ ವಾಣಿಗಳನ್ನು (1092, 122,155214) ಬಳಸಿ ಅವರ ರಕ್ಷಣಾ ಕಾರ್ಯಕ್ಕೆ ಸ್ಪಂದಸಬೇಕೆಂದು ವಿದ್ಯಾರ್ಥಿಯುವ ಸಮೂಹಕ್ಕೆ ಕರೆಕೊಟ್ಟರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ, ಹೊನ್ನಪ್ಪ, ವೀರಮ್ಮ, ಮಾರುತಿ ಸೇರಿದಂತೆ ಉಪಸ್ಥಿತರಿದ್ದರು.