ಸಂಗನಬಸವ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ವಿಶ್ವ ರಕ್ತದಾನ ದಿನಾಚರಣೆ
ವಿಜಯಪುರ,ಜೂ.15:ತಾಲೂಕಿನ ಕವಲಗಿ ಗ್ರಾಮದಲ್ಲಿ ಇರುವ ಶ್ರೀ ಸಿದ್ಧೇಶ್ವರ ಸಂಸ್ಥೆಯ ಸಂಗನಬಸವ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ವಿಶ್ವ ರಕ್ತದಾನ ದಿನವನ್ನು ಆಚರಿಸಲಾಯಿತು.
ಶಾಲೆಯ ಪ್ರಾಚಾರ್ಯೆ ಶರ್ಮಿಳಾ ಹೇಮಂತ್ ಅವರು ಮಾತನಾಡಿ, “ಅನ್ನದಾನ, ವಸ್ತ್ರದಾನ, ಇವೆಲ್ಲಕ್ಕಿಂತ ರಕ್ತದಾನ ಮಹಾದಾನ” ಎಂದು ಹೇಳುತ್ತ ಅಪಘಾತವಾದಾಗÀ ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರಕ್ತದ ಅವಶ್ಯಕತೆಯನ್ನು ತಿಳಿಸಿದರು.
ವಿದ್ಯಾರ್ಥಿನಿಯರಾದ ಕುಮಾರಿ ಐಶ್ವರ್ಯ ಎಸ್ ಪತ್ತಾರ, ಕುಮಾರಿ ಪೂರ್ಣಿಮಾ ಎಸ್. ತೇರದಾಳ ಮತ್ತು ಕುಮಾರಿ ಸಾಕ್ಷಿ ಗೋಸಾವಿ ಅವರು ರಕ್ತದಾನದÀ ಕುರಿತು ಮಾತನಾಡಿದರು, ವಿಜ್ಞಾನ ವಿಭಾಗದ ಶಿಕ್ಷಕ ಗುರುಬಸಪ್ಪ ಕಬಾಡಗಿ ಅವರು ಮಕ್ಕಳಿಗೆ ಆಹಾರದಲ್ಲಿ ಹಾಲು, ಹಣ್ಣು, ತರಕಾರಿಗಳನ್ನು ಬಳಸಲು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕ, ಶಿಕ್ಷಕಿಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕುಮಾರಿ ಕೃಷಾ ತುಪ್ಪದ ಸ್ವಾಗತಿಸಿದರು. ಕುಮಾರಿ ತನುಶ್ರೀ ಡಂಬಾಳ ನಿರೂಪಿಸಿದರು. ಕುಮಾರಿ ಮಾಂತಶಾ ಸೈದಾಪೂರ ವಂದಿಸಿದರು.