ಹ್ಯಾಟ್ರಿಕ್ ಗೆಲುವಿನ ಸರದಾರ ಬಿಜೆಪಿ ಸಂಸದ ರಮೇಶ್ ಜಿಗಜಿಣಿಗಿಗೆ ಸನ್ಮಾನ
ದೇವರಹಿಪ್ಪರಗಿ : ಜೂ.15: ಹ್ಯಾಟ್ರಿಕ್ ಗೆಲುವಿನ ಸರದಾರ ಬಿಜೆಪಿ ಸಂಸದರಾದ ರಮೇಶ್ ಜಿಗಜಿಣಿಗಿ ರವರಿಗೆ ಇಂದು ವಿಜಯಪುರದ ಪ್ರವಾಸಿ ಮಂದಿರದಲ್ಲಿ ದೇವರ ಹಿಪ್ಪರಗಿ ಬಿಜೆಪಿ ಎಸ್ಸಿ ಮೋರ್ಚಾ ಮಂಡಲ ಅಧ್ಯಕ್ಷರು ಡಾ. ಮಲಕಪ್ಪ ಬಾಗೇವಾಡಿ ರವರು ಶಾಲು ಹೊದಿಸಿ ಸನ್ಮಾನ ಮಾಡಿದರು.
ವಿಜಯಪುರ ಎಸ್ ಸಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸಂಸದ ರಮೇಶ ಜಿಗಿಜಣಿಗಿ ಮತ್ತೆ ಗೆಲವು ಸಾದಿಸಿದ್ದಾರೆ.ಎಸ್ಸಿ ಮೀಸಲು ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದು ದಾಖಲೆ ನಿರ್ಮಿಸಿದ್ದಾರೆ.
ಬಿಜೆಪಿ ಪಕ್ಷದಲ್ಲಿ ಅತ್ಯಂತ ಹಿರಿಯ ಸಂಸದರು. ಎಲ್ಲರಿಗೂ ಕಾಕಾ, ಮಾಮಾ , ಬಾಬಾ ಅಂತ ಗೌರವ ಸಲ್ಲಿಸಿ, ಸರಳ ಸಜ್ಜನಿಕೆಯ ರಾಜಕಾರಣಿ ಮಾಡಿದ್ದಾರೆ.ಸತತ ಏಳು ಬಾರಿ ಸಂಸದರಾಗಿ ಆಯ್ಕೆಯಾದ ವಿಜಯಪುರದ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ರವರಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದಲ್ಲಿ ಸಚಿವ ಸ್ಥಾನ ನೀಡಬೇಕಾಗಿತ್ತು. ಆದರೆ ಬೇಸರದ ಸಂಗತಿ ಎಂದ ಜಾಂಭವ ಯುವ ಸೇನಾ ಸಂಘಟನೆ ರಾಜ್ಯ ಉಪಾಧ್ಯಕ್ಷರು ಹಾಗೂ ಬಿಜೆಪಿ ಎಸ್ಸಿ ಮೋರ್ಚಾ ಮಂಡಲ ಅಧ್ಯಕ್ಷರು ಡಾ,ಮಲಕಪ್ಪ ಬಾಗೇವಾಡಿ.
ಈ ಸಂದರ್ಭದಲ್ಲಿ. ಜಾಂಭವ ಯುವ ಸೇನಾ ಸಂಘಟನೆಯ ಬಸವನ ಬಾಗೇವಾಡಿ ತಾಲೂಕ ಯುವ ಘಟಕ ಅಧ್ಯಕ್ಷರಾದ ರಮೇಶ ಹಳ್ಳಿ, ಮಹಾಂತೇಶ ಹಾದಿಮನಿ, ಮುದಕಪ್ಪ ಮೇಟಗಾರ ವಿಠಲ್ ಹೊಸಮನಿ, ಪ್ರಜ್ವಲ್ ದೊಡಮನಿ. ಇನ್ನು ಅನೇಕರು ಇದ್ದರು.