ಬಸವಕಲ್ಯಾಣ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಅತೀವೃಷ್ಟಿಯಿಂದ ಹಾನಿ ಕುರಿತು ಪರಿಹಾರ ಕಲ್ಪಿಸುವಂತೆ ಸಿಎಂಗೆ ಶಾಸಕ ಶರಣು ಸಲಗರ ಮನವಿ
ಬಸವಕಲ್ಯಾಣ:ಜೂ.15: ಬಸವಕಲ್ಯಾಣ ಮತ ಕ್ಷೇತ್ರ ವ್ಯಾಪ್ತಿಯಲ್ಲಿ ಅತೀವೃಷ್ಟಿಯಿಂದ ಹಾನಿಗೆ ಪರಿಹಾರ ಕಲ್ಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕ ಶರಣು ಸಲಗರ ಮನವಿ ಮಾಡಿದರು. ಭಾರೀ ಮಳೆಯಿಂದಾಗಿ ಬಸವಕಲ್ಯಾಣ ತಾಲೂಕಿನ ಅಟ್ಟೂರ ಹಾಗೂ ಕೊಹಿನೂರ-ಭೋಸಗಾ ಮಧ್ಯೆ ಇರುವ ಎರಡು ಕೆರೆಗಳು ಒಡೆದು ಸಾವಿರಾರು ಎಕರೆಯ ಜಮೀನಿನಲ್ಲಿನ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದ್ದು ರೈತಾಪಿ ವರ್ಗ ಸಂಕಷ್ಟದಲ್ಲಿದ್ದಾರೆ ಹೀಗಾಗಿ ಸೂಕ್ತ ಪರಿಹಾರ ಕಲ್ಪಿಸುವಂತೆ ಸಿಎಂಗೆ ಒತ್ತಾಯಿಸಿದರು.
ಈ ಸಂಬಂಧ ಶುಕ್ರವಾರ ಬೆಂಗಳೂರಿನ ಮುಖ್ಯಮಂತ್ರಿ ಅವರ ಗೃಹ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಶಾಸಕರು, ಬಸವಕಲ್ಯಾಣ ಹಾಗೂ ಹುಲಸೂರ ತಾಲೂಕಿನಲ್ಲಿ ಭಾರೀ ಮಳೆಯಿಂದಾಗಿ ವಿವಿಧೆಡೆ ಹಳ್ಳ ಕೊಳ್ಳಗಳು ತುಂಬಿ ಹರಿದು ಸೇತುವೆಗಳು ಕೊಚ್ಚಿಕೊಂಡು ಹೋಗಿ ರಸ್ತೆಗಳು ಭಾರೀ ಪ್ರಮಾಣದಲ್ಲಿ ಹಾನಿಯಾಗಿವೆ. ಅನೇಕ ಕಡೆಗಳಲ್ಲಿ ಸಂಚಾರದಲ್ಲಿ ವ್ಯತಯ ಉಂಟಾಗಿ ಸಂಪರ್ಕಗಳು ಕಡಿತಗೊಂಡಿವೆ ಹೀಗಾಗಿ ಜನರು ಸಂಕಷ್ಟದಲ್ಲಿದ್ದಾರೆ ಎಂದು ಬಸವಕಲ್ಯಾಣ ಕ್ಷೇತ್ರದಲ್ಲಿನ ಸಮಸ್ಯೆಯ ಕುರಿತು ಮಾಹಿತಿ ವಿವಿರಿಸಿದರು.
ಮುಂಗಾರು ಮಳೆ ನಿಗದಿತ ಅವಧಿಯಲ್ಲಿಯೇ ಪ್ರಾರಂಭವಾಗಿತ್ತು. ರೈತರು ಸಂಸತದಿಂದ್ದರು. ಹೊಲಗಳನ್ನು ಹದ ಮಾಡಿ ಕೆಲವರು ಬಿತ್ತನೆ ಮಾಡಿದರು. ಇನ್ನೂ ಕೆಲವರು ಮಾಡುವವರಿದ್ದರು. ಆದರೆ ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗಿನ ವರೆಗೆ ಸುರಿದ ಭಾರೀ ಮಳೆಯಿಂದಾಗಿ ಒಡೆದ ಕೆರೆಯಿಂದಾಗಿ ಕೆರೆಗಳ ಸುತ್ತ-ಮುತ್ತ ಇರುವ ಹೊಲಗಳಿಗೆ ಹಾನಿಯಾಗಿದೆ. ಹೊಲದಲ್ಲಿನ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದ್ದು ಹೊಲದಲ್ಲಿ ಕೇವಲ ರೈತರು ಸಂಕಷ್ಟದಲ್ಲಿದ್ದಾರೆ. ಅಲ್ಲದೆ ಕೆಲವೆಡೆ ಮನೆಗಳಿಗೆ ನೀರು ನಿಗ್ಗಿ ಹಾನಿಯಾಗಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳಿವೆ ಹೀಗಾಗಿ ಜನರು ಸಂಕಷ್ಟದಲ್ಲಿದ್ದಾರೆ. ಅವರ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು ವಿಶೇಷವಾದ ಅನುದಾನ ಮಂಜೂರು ಮಾಡಿ, ಆದಷ್ಟು ಬೇಗ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಶಾಸಕರು ಮನವಿ ಮಾಡಿದರು.
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಬಸವಕಲ್ಯಾಣ ತಾಲೂಕಿನಲ್ಲಿ ಮಳೆಯಿಂದಾಗಿ ಹಾನಿ ಕುರಿತು ನಿರ್ದಿಷ್ಟವಾದ ಸಮೀಕ್ಷೆ ನಡೆಸಲು ಸಂಬಂಧಿತರಿಗೆ ಸೂಚಿಸಲಾಗುವದು. ವರದಿ ಬಂದ ನಂತರ ಸೂಕ್ತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವದು ಹಾನಿಗೊಳಗಾದ ರಸ್ತೆ, ಸೇತುವೆಗಳ ಮರು ನಿರ್ಮಾಣಕ್ಕೆ ಅಗತ್ಯ ಅನುದಾನ ಕಲ್ಪಿಸಲಾಗುವದು ಎಂದು ಸಿಎಂ ಅವರು ಶಾಸಕ ಶರಣು ಸಲಗರ ಅವರಿಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸೂರ್ಯಕಾಂತ ಚಿಲ್ಲಾಬಟ್ಟೆ, ರತಿಕಾಂತ ಕೊಹಿನೂರ, ಅಶೋಕ ಹೊಕ್ರಾಣಿ ಸೇರಿದಂತೆ ಮತ್ತಿತರಿದ್ದರು.