ಸಿರಿಧಾನ್ಯದಿಂದ ತಯಾರಿಸಿದ ಆಹಾರಗಳಿಗೆ ಬೇಡಿಕೆ
ಬಸವಕಲ್ಯಾಣ:ಜೂ.15: ಔಷಧಿ ಗುಣಗಳನ್ನು ಹೊಂದಿರುವ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರಗಳಿಗೆ ತುಂಬಾ ಬೇಡಿಕೆ ಇದೆ. ಇವುಗಳಿಂದ ತಯ್ಯಾರಿಸಿ ತಿನಿಸುಗಳು ರುಚಿಕರವಷ್ಟೆ ಅಲ್ಲ. ಆರೋಗ್ಯಕರ ಪರಿಣಾಮವು ಇವೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಡಾ.ಮಹೇಶ ಪಾಟೀಲ್ ಹೇಳಿದರು.
ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ ಹೈದರಾಬಾದ್, ಶುಭೋದಯ ಫಾರ್ಮರ್ಸ್ ಫೆಡರೇಶನ್ ಹಾಗೂ ಹುಲಸೂರು ಸಿರಿಧಾನ್ಯ ರೈತ ಉತ್ಪಾದಕ ಸಂಸ್ಥೆ ಸಹಯೋಗದೊಂದಿಗೆ ನಗರರದ ಶ್ರೀ ಬಸವೇಶ್ವರ ದೇವಸ್ಥಾನ ರಸ್ತೆಯ ಬದಿಯ ಚೌಕಿ ಮಠದಲ್ಲಿ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ಸಿರಿಧಾನ್ಯಗಳಿಂದ ಮನೆಯಲ್ಲಿ ವಿವಿಧ ಪದಾರ್ಥಗಳು ತಯಾರಿ ಮಾಡುವುದರ ಬಗ್ಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಿರಿಧಾನ್ಯದಲ್ಲಿ ನಾರಿನಾಂಶ ಪೆÇ್ರಟೀನ್, ಮಿನಿರಲ್ ಮತ್ತು ಅತ್ಯಧಿಕ ಕ್ಯಾಲ್ಸಿಯಂ ಹೊಂದಿದ್ದು ಬಹಳಷ್ಟು ರೋಗಗಳಿಗೆ ರಾಮಬಾಣವಾಗಿದೆ. ಸಿರಿಧಾನ್ಯ ಸೇವನೆಯಿಂದ ಬಿ.ಪಿ, ಶುಗರ್ ಮತ್ತು ಕ್ಯಾನ್ಸರನಹಂತ ಮಹಾ ರೋಗಿಗಳು ಬರದಂತೆ ತಡೆಯಬಹುದಾಗಿದೆ ಹೀಗಾಗಿ ಎಲ್ಲರೂ ತಮ್ಮ ಮನೆಯಲ್ಲಿ ಸಿರಿಧಾನ್ಯಗಳ ಪದಾರ್ಥಗಳನ್ನು ಸೇವನೆ ಮಾಡಬೇಕು ಎಂದು ಸಲಹೆ ನೀಡಿದರು.
ಹುಲಸೂರು ಸಿರಿಧಾನ್ಯ ಘಟಕದ ಮುಖ್ಯಸ್ಥ ಅಶೋಕ್ ಸಜ್ಜನ್ ಮಾತನಾಡಿ, ಸಿರಿಧಾನ್ಯಗಳಿಂದ ತಿನಿಸುಗಳನ್ನು ತಯಾರಿಕೆ ಮಾಡುವ ಮೂಲಕ ಮಹಿಳೆಯರು ಸ್ವಂತ ಉದ್ದಿಮೆ ಆರಂಭಿಸಬೇಕು. ಇದರಿಂದ ಆರ್ಥಿಕ ಸಬಲತೆ ಸಾಧಿಸಲು ಅನುಕೂಲವಾಗುತ್ತದೆ ಎಂದರು.
ತೆಲಂಗಾಣದ ವೀರಶೆಟ್ಟಿ ಬಿರಾದಾರ ಅವರು ಸಿರಿಧಾನ್ಯದಿಂದ ಆಹಾರ ತಯ್ಯಾರಿಕೆ ಕುರಿತು ತರಬೇತಿ ನೀಡಿ, ನವಣೆಯಿಂದ ಚಕ್ಲಿ, ರಾಗಿಯಿಂದ ಚವನ್ಪ್ರಾಶ್, ರಾಗಿಯಿಂದ ಲಡ್ಡು ಮತ್ತು ಸಾಮೆಯಿಂದ ಚಕ್ಕಿ ತಯಾರಿಸುವ ವಿಧಾನವನ್ನು ತಿಳಿಸಿಕೊಟ್ಟರು. ಹುಲಸೂರು ಸಿರಿಧಾನ್ಯ ಸಂಸ್ಥೆಯ ಗಣೇಶ್ ಕಾಳೆ, ಬಸವಕಲ್ಯಾಣ ಅಕ್ಕನ ಬಳಗದ ಅಧ್ಯಕ್ಷರು ಹಾಗೂ ಸದಸ್ಯರು, ಉಪಸ್ಥಿತರಿದ್ದರು.