ನೆಮ್ಮದಿಯ ಜೀವನಕ್ಕಾಗಿ ಪರಿಸರ ಸಂರಕ್ಷಣೆ ಅತ್ಯಾವಶ್ಯಕ: ಡಾ.ಸಂಗೀತಾ ಮಂಠಾಳೆ
ಬಸವಕಲ್ಯಾಣ: ಜೂ.15:ಮಿತವಾದ ಆಹಾರ ಸೇವನೆ ಹಿತವಾದ ಜೀವನಕ್ಕೆ ಪೂರಕವಾಗಿದ್ದು, ಶುದ್ಧ ಮತ್ತು ಪೌಷ್ಟಿಕ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಕಾಫಾಡಿಕೊಳ್ಳಬಹುದು ಎಂದು ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮದ ಕಲಬುರಗಿ ವಿಭಾಗದ ಮೇಲ್ವಿಚಾರಕಿ ಡಾ.ಸಂಗೀತಾ ಮಂಠಾಳೆ ಹೇಳಿದರು.
ನಗರದ ಎಸ್‍ಎಸ್‍ಕೆ.ಬಸವೇಶ್ವರ ಹಾಗೂ ದೊಡ್ಡಪ್ಪ ಅಪ್ಪ ಬಿಸಿಎ ಕಾಲೇಜು ಮತ್ತು ಬೀದರ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಎನ್‍ಎಸ್‍ಎಸ್. ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಉತ್ತಮ ಆರೋಗ್ಯಕ್ಕೆ ಆತ್ಮ ವಿಶ್ವಾಸವೂ ಅವಶ್ಯಕ ಎಂದು ವಿಶ್ಲೇಷಿಸಿದರು.
ನೆಮ್ಮದಿಯ ಜೀವನಕ್ಕಾಗಿ ಪರಿಸರ ಸಂರಕ್ಷಣೆ ಅತ್ಯಾವಶ್ಯಕವಾಗಿದ್ದು, ವಯಕ್ತಿಕ, ಮಾನಸಿಕ, ಸಮಾಜಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸುತ್ತಲಿನ ಪರಿಸರ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಪ್ಲ್ಯಾಸ್ಟಿಕ್ ಬಳಕೆ ಆರೋಗ್ಯಕ್ಕೆ ಅಪಾಯಕಾರಿಯಾಗಿದ್ದು, ಪ್ಲಾಸ್ಟಿಕ್ ಪಾಕೀಟಿನಲ್ಲಿಯ ಆಹಾರವನ್ನು ಬಳಸುವದನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ.ಬಸವರಾಜ ಎವಲೆ ಮಾತನಾಡಿ, ಭವಿಷ್ಯ ರೂಪಿಸಿಕೊಳ್ಳುವ ಜತೆಗೆ ಸದೃಢ ರಾಷ್ಟ್ರ, ಆರೋಗ್ಯಪೂರ್ಣ ಸಮಾಜ ಕಟ್ಟುವಲ್ಲಿ ನಿಮ್ಮೆಲ್ಲರ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪಾಲನೆ, ಉತ್ತಮ ಸಂಸ್ಕಾರ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿ ಶಿಬಿರ ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಶ್ರಮ ವಹಿಸಿ ಅಭ್ಯಾಸ ಮಾಡುವ ಜತೆಗೆ ನಿಸ್ವಾರ್ಥ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಎನ್‍ಎಸ್‍ಎಸ್ ಕಾರ್ಯಕ್ರಮದ ಅಧಿಕಾರಿ ಪ್ರೊ. ವಿಠೋಬಾ ದೊಣ್ಣೆಗೌಡರ ಪ್ರಾಸ್ತಾವಿಕ ಮಾತನಾಡಿ, ಶಿಬಿರದಲ್ಲಿ ಒಂದು ವಾರ ನಡೆದ ಕಾರ್ಯಚಟುವಟಿಕೆಗಳ ಮಹಿತಿ ನೀಡಿದರು. ಐಕ್ಯೂಎಸಿ ಸಂಯೋಕ ಡಾ.ಶಿವಕುಮಾರ ಪಾಟೀಲ್, ಡಾ. ಶಾಂತಕುಮಾರ ಬಾಬನಗೋಳ. ಪ್ರೊ.ಆರ್‍ಡಿ.ಬಾಲಿಕಿಲೆ, ಪ್ರೊ. ಲಕ್ಷ್ಮೀಬಾಯಿ ಭಂಕೂರ, ಡಾ.ಸುರೇಶ ಎಚ್, ಆರ್, ಬಿಸಿಎ ಪ್ರಾಚಾರ್ಯ ಲೋಕೇಶ ಮನ್ನಾಳೆ, ಶಾಂತಕುಮಾರ ಭುರೆ, ಗ್ರಂಥಪಾಲಕ ಸೂರ್ಯಕಾಂತ ನಾಸೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಆರತಿÀ ಸ್ವಾಗತಿಸಿದರೆ, ನೇತ್ರಾ ನೀರೂಪಿಸಿದರು. ರೇಣುಕಾ ವಂದಿಸಿದರು.