ಮಲೇರಿಯಾ ವಿರೋಧಿ ಮಾಸಾಚರಣೆ
ಚಿಟಗುಪ್ಪ:ಜೂ.15:ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೀದರ್ ಹಾಗು ತಾಲೂಕು ಆರೋಗ್ಯ ಅಧಿಕಾರಿಗಳು ಚಿಟಗುಪ್ಪ ಇವರ ಸಯುಕ್ತ ಆಶ್ರಯದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಚಿಟ್ಟಗುಪ್ಪ ಆಸ್ಪತ್ರೆಯಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿಗಳಾದ ಡಾಕ್ಟರ್ ವಿಜಯ ಹಿರಸ್ಕರ್ ಮಲೇರಿಯಾ ಕುರಿತು ತಮ್ಮ ತಮ್ಮ ಮನೆಗಳಲ್ಲಿ ನಿಂತ ನೀರು. ಮತ್ತು ಮನೆಗಳಲ್ಲಿ ಇಡಲಾದ ಟೈರು,ಬ್ಯಾಲರ್. ಹೂ ಕುಂಡಗಳಲ್ಲಿ ನೀರು ನಿಲ್ಲದಂತೆ. ಹಾಗೂ ಸೊಳ್ಳೆಗಳು ಹಾರಡದಂತೆ ನೋಡಿಕೊಳ್ಳಬೇಕು ಮತ್ತು ತಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳಲು ಆಸ್ಪತ್ರೆಗೆ ಬಂದಿರುವ ಜನರಿಗೆ ಸಲಹೆ ನೀಡಿದರು.
ಆಸ್ಪತ್ರೆಯ ಸಿಬ್ಬಂದಿಗಳಾದ ಡಾ.ವಿರರೆಡ್ಡಿ ಡಾ. ಸ್ನೇಹ ಡಾ. ರಾಜ್ಮಾ ಪಟೇಲ್ ದೇವೇಂದ್ರ ನಾಗನಕೇರ.ಪ್ರಭು ಮುದ್ನಾಳ್ಕರ್ ನಾಗೇಂದ್ರ ನಂದು ಕುಮಾರ.ಪ್ರಕಾಶ್. ಗೀತಾ. ತುಳಜಾ.ಸುಮಾ ವಂದನಾಶ್ಣಿ. ಅನಿಲ್ ಕುಮಾರ್ ಸಿದ್ದಲಿಂಗ ಅರುಣ್ ಕುಮಾರ್ ಇತರರು ಹಾಜರಿದ್ದರು