ಶ್ರೀ ಸಿದ್ಧೇಶ್ವರ ಸಂಸ್ಥೆಯಿಂದ ಚಿಂಚೋಳಿಯಲ್ಲಿ ಸಿದ್ದಸಿರಿ ಪಬ್ಲಿಕ್ ಶಾಲೆಪ್ರಾರಂಭೋತ್ಸವ
ವಿಜಯಪುರ,ಜೂ.15:ಶ್ರೀ ಸಿದ್ಧೇಶ್ವರ ಸಂಸ್ಥೆಯಿಂದ ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಸಿದ್ದಸಿರಿ ಪಬ್ಲಿಕ್ ಶಾಲೆಯನ್ನು ಶ್ರೀ ಸಿದ್ಧೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಎಸ್ ಹಿರೇಮಠ ಅವರು, ಶಾಲೆಯ ಉದ್ಘಾಟನೆ ಹಾಗೂ ಸರಸ್ವತಿ ಪೂಜೆ ಕಾರ್ಯಕ್ರಮದೊಂದಿಗೆ ಪ್ರಾರಂಭಿಸಲಾಯಿತು.
ಈ ಸಂದರ್ಭದಲ್ಲಿ ಸಿದ್ದೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಎಸ್ ಹಿರೇಮಠ ಅವರು ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಒಳ್ಳೆಯ ಶಿಕ್ಷಣ ಕೊಡುವ ಸದುದ್ದೇಶದಿಂದ ಈ ಶಾಲೆಯನ್ನು ನಮ್ಮ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಜಯಪುರ ನಗರದ ಜನಪ್ರಿಯ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಅವರ ಅಪೇಕ್ಷೆಯಂತೆ ಪ್ರಾರಂಭಿಸಲಾಗಿದೆ. ಈ ಶಾಲೆಗೆ ಒಳ್ಳೆಯ ಕಟ್ಟಡ, ಬಸ್ಸುಗಳ ಸೌಲಭ್ಯ ಹಾಗೂ ನುರಿತ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದರು.
ಪಾಲಕರು ತಮ್ಮ ಮಕ್ಕಳನ್ನು ನಮ್ಮ ಶಾಲೆಯಲ್ಲಿ ಪ್ರವೇಶ ಪಡೆಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಚ್. ದೇಸಾಯಿ, ಬಿ.ಎಸ್. ಸುಗೂರ, ಜಂಟಿ ಕಾರ್ಯದರ್ಶಿ ಎಮ್.ಎಮ್. ಸಜ್ಜನ, ಕೋಶಾಧ್ಯಕ್ಷ ಶಿವಾನಂದ ಎನ್ ನೀಲಾ, ನಿರ್ದೇಶಕರಾದ ಚಂದು ಹುಂಡೇಕಾರ, ಎನ್ ಎಮ್ ಗೋಲಾಯಿ, ವಿಜಯಕುಮಾರ ಡೋಣಿ, ಮಲಕಪ್ಪ ಗಾಣಿಗೇರ, ರಮೇಶ ಎಸ್ ಹಳ್ಳದ, ನಾಗಪ್ಪ ಗುಗ್ಗರಿ, ಸಂಸ್ಥೆಯ ಶಿಕ್ಷಣಾಧಿಕಾರಿ ಎಚ್. ವೆಂಕಟೇಶ, ಕಾರ್ಯ ನಿರ್ವಾಹಣ ಅಧಿಕಾರಿ ಎನ್.ಎಮ್. ಪ್ಯಾಟಿ, ಪ್ರಿನ್ಸಿಪಾಲರಾದ ಪುಷ್ಪಿಕಾ ಟಿರ್ಕೆ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.