ರಕ್ತದಾನ ಶ್ರೇಷ್ಠ ದಾನ: ಡಾ. ರಜನೀಶ ಎಸ್. ವಾಲಿ
ಬೀದರ : ಜೂ.15: ನಗರದ ಪ್ರತಿಷ್ಠಿತ ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯ ಬ್ರಿಮ್ಸ್ ರಕ್ತನಿಧಿ ಕೇಂದ್ರ ಮತ್ತು ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ ಬೀದರ ಇವರುಗಳ ಸಂಯುಕ್ತಾಶ್ರಯದಲ್ಲಿ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಸದಸ್ಯರು ಹಾಗೂ ಬಿ.ವಿ.ಬಿ ಮಹಾವಿದ್ಯಾಲಯ ಶಾಲಾ ಕಾಲೇಜುಗಳ ಸಂಚಾಲಕರಾದ ಡಾ. ರಜನೀಶ್ ಎಸ್. ವಾಲಿಯವರು ಮಾತನಾಡುತ್ತಾ ರಕ್ತದಾನ ಮಹಾದಾನ ರಕ್ತದಾನದಿಂದ ಹಲವಾರು ರೋಗಿಗಳ ಜೀವಗಳನ್ನು ಉಳಿಸಬಹುದು, ಉದಾಹರಣೆ ಆಕಸ್ಮಿಕ ಅಪಘಾತದಲ್ಲಿ ರೋಗಿಯ ಶರೀರದಿಂದ ರಕ್ತ ಸ್ರಾವವಾದಗ ರಕ್ತ ಬೇಕಾಗುತ್ತದೆ, ರಕ್ತದಾನಿಗಳು ರಕ್ತ ಕೊಡುವುದರಿಂದ ಅವರ ದೇಹದಲ್ಲಿ ಮೂರು ತಿಂಗಳ ಒಳಗೆ ಮತ್ತೆ ಹೊಸ ರಕ್ತ ಕಣಗಳು ಉತ್ಪತ್ತಿಯಾಗುತ್ತವೆ. ಇದರಿಂದ ಯಾರು ಭಯಪಡದೆ ರಕ್ತದಾನವನ್ನು ಮಾಡಬೇಕು ಎಂದು ಮಾರ್ಮಿಕವಾಗಿ ನುಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬ್ರಿಮ್ಸ್ ವೈದ್ಯರಾದ ಡಾ. ಮಲ್ಲನಗೌಡ ಪಾಟೀಲ ಮಾತನಾಡುತ್ತಾ ರಕ್ತದಾನ ಶ್ರೇಷ್ಠ ದಾನ ರಕ್ತದಾನ ಮಾಡುವವರ ಸಂಖ್ಯೆ ಹೆಚ್ಚಾಗಬೇಕು ಇದರಿಂದ ಜೀವ ಕಳೆದುಕೊಳ್ಳುವ ಸ್ಥಿತಿಯಲ್ಲಿರುವ ರೋಗಿಗಳಿಗೆ ಜೀವಕೊಟ್ಟಂತಾಗುತ್ತದೆ ಎಂದು ನುಡಿದರು.
ವೇದಿಕೆಯ ಮೇಲೆ ಉಪಸ್ಥಿತರಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರಡ್ಡಿಯವರು ಮಾತನಾಡುತ್ತಾ ರಕ್ತದಾನ ಮಹಾದಾನÉ, ಅನ್ನದಾನ, ನೇತ್ರದಾನ, ವಿದ್ಯಾದಾನ ಇವೇಲ್ಲವುಕ್ಕಿಂತ ಮಿಗಲಾಗಿ ಮತ್ತೊಬ್ಬರ ಪ್ರಾಣ ಉಳಿಸುವ ರಕ್ತದಾನ ಶ್ರೇಷ್ಠದಾನವಾಗಿದೆ, ರಕ್ತದಾನ ಮಾಡಿದ ರಕ್ತವನ್ನು ನಾಲ್ಕು ಘಟಕಗಳಾಗಿ ವಿಂಗಡಿಸಿ ಶೇಖರಣೆ ಮಾಡಬಹುದು 1)ಪ್ಲಾಸ್ಮಾ 2)ಬಿಳಿ ರಕ್ತ ಕಣಗಳು 3)ಕೆಂಪು ರಕ್ತ ಕಣಗಳು ಹಾಗೂ 4) ಪ್ಲೇಟ್‍ಲೇಟ್ಸ್ ಈ ರೀತಿಯಾಗಿ ವಿಂಗಡಿಸಿ ನಾಲ್ಕು ಜೀವಗಳನ್ನು ಉಳಿಸಬಹುದು ಎಂದು ಮಾರ್ಮಿಕವಾಗಿ ತಿಳಿಸಿದರು.
ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಶ್ರೀ ಅನೀಲಕುಮಾರ ಅಣದೂರೆಯವರು ಮಾತನಾಡುತ್ತಾ ರಕ್ತದಾನ ಮಾಡುವುದರಿಂದ ಜೀವನದ ಕೊನೆಕ್ಷಣದಲ್ಲಿರುವ ರೋಗಿಗಳಿಗೆ ಜೀವಕೊಂಟ್ಟತ್ತಾಗುತ್ತದೆ. ಭೂಮಿಯ ಮೇಲೆ ಜನಿಸದ ಪ್ರತಿಯೊಬ್ಬ ವ್ಯಕ್ತಿಯೂ ರಕ್ತದಾನ ಮಾಡಲು ಹಿಂಜರಿಯದೇ ರಕ್ತಕೊಟ್ಟು ಜೀವ ಉಳಿಸಬೇಕೆಂದು ಹೇಳಿದರು.
ಮಹಾವಿದ್ಯಾಲಯದ ಎನ್.ಎಸ್.ಎಸ್. ಅಧಿಕಾರಿಗಳಾದ ಡಾ. ದೀಪಾ ರಾಗ ಮಾತನಾಡುತ್ತಾ ಪ್ರತಿಯೊಂದು ಗ್ರಾಮದಲ್ಲಿ ಎನ್.ಎಸ್.ಎಸ್. ಶಿಬಿರಾರ್ಥಿಗಳು ರಕ್ತದಾನದ ಮಹತ್ವ ಕುರಿತು ಜನರಿಗೆ ತಿಳಿಸಬೇಕು ಆರೋಗ್ಯವಂತ ವ್ಯಕ್ತ ವರ್ಷಕ್ಕೆ ಮೂರು ಬಾರಿ ರಕ್ತದಾನ ಮಾಡಿದರು ಯಾವುದೇ ತರಹದ ಹಾನಿಯಾಗುವುದಿಲ್ಲವೆಂದು ತಿಳಿಸಿದರು. ಈ ಶಿಬಿರದಲ್ಲಿ 15 ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಲ್ಲಿಕಾರ್ಜುನ ಕನಕಟ್ಟೆಯವರು ಮಾತನಾಡುತ್ತಾ ರಕ್ತದಾನ ಮಾಡಿದಾಗ ದೇಹದಿಂದ ಹಳೆ ರಕ್ತಹೋಗಿ ಹೊಸ ರಕ್ತ ಉತ್ಪತ್ತಿಯಾಗಲು ಸಹಕಾರಿಯಾಗುತ್ತದೆ ಹಾಗೂ ಯಾವುದೇ ರೋಗರುಜಿನಗಳು ದೇಹಕ್ಕೆ ಬರುವುದಿಲ್ಲವೆಂದು ನುಡಿದರು.
ಕಾರ್ಯಕ್ರಮದ ಮೊದಲಿಗೆ ಡಾ. ಸಂತೋಷ ಸಜ್ಜನ ಸ್ವಾಗತಿಸಿದರೆ, ಶ್ರೀಮತಿ ವೀಣಾ ಜಲಾದೆ ವಂದಿಸಿದರೆ, ಶ್ರೀ ರಾಜಕುಮಾರು ಸಿಂಧೆ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಮಹಾವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.