ಸಂಸದ ಸಾಗರ ಖಂಡ್ರೆಗೆ ಗೌರವ ಸನ್ಮಾನ
ಬೀದರ್: ಜೂ.15:ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡ ಸಂಸ್ಥಾನ ಹಿರೇಮಠಕ್ಕೆ ಬೀದರ ಜಿಲ್ಲೆಯ ನೂತನ ಸಂಸದ ಸಾಗರ ಖಂಡ್ರೆ ಆಗಮಿಸಿದಾಗ ಪೀಠಾಧಿಪತಿ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರು ಸತ್ಕರಿಸಿ, ಗೌರವಿಸಿದರು.
ಮಲ್ಲಿನಾಥ ಹಿರೇಮಠ ಹಾರಕೂಡ, ಸಿದ್ರಾಮಪ್ಪ ಗುದಗೆ, ನೀಲಕಂಠ ರಾಠೋಡ, ಶರಣು ಅಲಗುಡ, ಶಶಿಕಾಂತ ದುರ್ಗೆ, ಮಂಜುನಾಥ ಪಿರಜೆ, ಕಲ್ಯಾಣರಾವ ಬೆಳಮಗೆ ಮುಂತಾದವರು ಉಪಸ್ಥಿತರಿದ್ದರು.