ಶಾಲೆಗಳಿಗೆ ಮಿಂಚಿನ ಸಂಚಾರ ತಂಡ ಹಠಾತ್ ಭೇಟಿ
ಆಳಂದ:ಜೂ.15: ತಾಲೂಕಿನ ವಿವಿಧ ಶಾಲೆಗಳಿಗೆ ಮಿಂಚಿನ ಸಂಚಾರ ತಂಡದ ಅಧಿಕಾರಿಗಳು ಹಠಾತ ಸಂದರ್ಶನ ನೀಡಿ ಶಾಲಾ ಶೈಕ್ಷಣಿಕ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದರು.
ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊರಳ್ಳಿಗೆ, ಶಿಕ್ಷಣ ಸಂಯೋಜಕ ಪ್ರಕಾಶ್ ಕೊಟ್ರೆ ಮತ್ತು ಸಿಆರ್ಪಿ ರಮೇಶ್ ದೊಡ್ಡಮನಿ ತಂಡ ಭೇಟಿ ನೀಡಿ 2024-25ನೇ ಶೈಕ್ಷಣಿಕ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಶೀಲಿಸಿ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.
ಅಲ್ಲದೆ, ಆಳಂದ ಸರ್ಕಾರಿ ಪ್ರೌಢಶಾಲೆ ಬಾಲಕರ ಮತ್ತು ಸರ್ಕಾರಿ ಕನ್ಯಾ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ ಗೋಳಾ ಹೀಗೆ ವಿವಿಧ ಶಾಲೆಗಳಿಗೆ ಭೇಟಿ ನೀಡಿ, ಭೇಟಿಯ ಸಂದರ್ಭದಲ್ಲಿ ಶಾಲಾ ಸ್ವಚ್ಛತೆ ಕೈಗೊಂಡ ಬಗ್ಗೆ. ಶಾಲಾ ವಾರ್ಷಿಕ ಕ್ರಿಯೆ ಯೋಜನೆ ಶಾಲಾ ಶೈಕ್ಷಣಿಕ ಯೋಜನೆ. ಶಾಲಾ ಅಭಿವೃದ್ಧಿ ಯೋಜನೆ,. ತರಗತಿವಾರು ವೇಳಾಪಟ್ಟಿ, ಸೇತು ಬಂಧ ಶೈಕ್ಷಣಿಕ ಚಟುವಟಿಕೆ, ಪೂರ್ವ ಪರೀಕ್ಷೆ, ಪರಿಹಾರ ಬೋಧನೆ ಮತ್ತು ದಾಖಲಾತಿ ಅಂದೋಲನ ಮಾಡಿರುವ ವರದಿ ಪರಿಶೀಲಿಸಿದರು.
ಶಾಲಾ ಬಿಸಿ ಊಟ ಕೋಣೆ ಸ್ವಚ್ಛತೆ. ಮತ್ತು ಶಿಕ್ಷಕರ ವೈಯಕ್ತಿಕ ಪಾಠ ಯೋಜನೆ. ವಿಷಯವಾರು ವಾರ್ಷಿಕ ಕ್ರಿಯಾಯೋಜನೆ , ಪಠ್ಯ ವಿಭಜನೆ , ನಲಿ ಕಲಿ ತರಗತಿ ಸಿದ್ಧತೆ, ಈಗ ಅನೇಕ ವಿಷಯಗಳ ದಾಖಲೆಗಳನ್ನು ಪರಿಶೀಲಿಸಿ ಮಾರ್ಗದರ್ಶನ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಸೇರಿದಂತೆ ಕ್ಷೇತ್ರ ಸಮನ್ವಧಿಕಾರಿಗಳು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು, ತಾಲೂಕಿನ ಎಲಾ ್ಲಸಿಆರ್‍ಪಿ, ಬಿಆರ್‍ಪಿ ಮತ್ತು ಶಿಕ್ಷಣ ಸಂಯೋಜಕ ಒಳಗೊಂಡ ತಂಡ, ತಾಲೂಕಿನ ವಿವಿಧ ಶಾಲೆಗಳಿಗೆ ಶನಿವಾರ ಭೇಟಿ ನೀಡಿ ಮಿಂಚಿನ ಸಂಚಾರದ ಪರಿಣಾಮಕಾರಿಗೆ ಸೂಚನೆ ನೀಡಿದರು.