ಬೇಲೂರ(ಜೆ) ಗ್ರಾಮದ ತಾಂಡಾ ರಸ್ತೆ ಅಭಿವೃದ್ದಿಗೆ ಆನಂದ ತೆಗನೂರ ಮನವಿ
ಕಲಬುರಗಿ:ಜೂ.15: ಬೇಲೂರ ಕ್ರಾಸ್ ನಿಂದ ಬೇಲೂರ ಊರಿಗೆ ಹೋಗುವ ಮಾರ್ಗದ ತಾಂಡಾದ ತಿರುವಿನಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು,
ರಸ್ತೆಯು ಮಳೆಯಿಂದ ಕೆಸರು ಗದ್ದೆಯಾಗಿದ್ದು, ಇದರಿಂದ ವಾಹನ ಸಂಚಾರ ಮತ್ತು ಪಾದಚಾರಿಗಳ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದ್ದು, ರಸ್ತೆ ದುರಸ್ತಿಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಕನ್ನಡ ಭೂಮಿ ಜಾಗೃತಿ ಸಮಿತಿ ಉತ್ತರ ಕರ್ನಾಟಕ ವಕ್ತಾರರಾದ ಆನಂದ ತೆಗನೂರ ಒತ್ತಾಯಿಸಿದ್ದಾರೆ.