ಸಂಭ್ರಮದಿಂದ ಜರುಗಿದ ಆನೂರ ಚಂದ್ರಗಿರಿ ದೇವಿಯ ಅಗ್ನಿ ಪ್ರವೇಶ
ಅಫಜಲಪುರ:ಜೂ.15: ಪ್ರತಿ ವರ್ಷದ ಪದ್ಧತಿಯಂತೆ ತಾಲೂಕಿನ ಸುಕ್ಷೇತ್ರ ಆನೂರ ಗ್ರಾಮದ ಗ್ರಾಮ ದೇವತೆ ಚಂದ್ರಗಿರಿ ದೇವಿಯ ಜಾತ್ರಾ ಮಹೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿದ ಜರುಗಿತು.
ಜೂ.13 ರ ಗುರುವಾರದಂದು ಬೆಳಿಗ್ಗೆ ಚಂದ್ರಗಿರಿ ದೇವಿಗೆ ಮಹಾಪೂಜೆ ಮತ್ತು ಜಟಿಂಗರಾಯ ದೇವರ ಪಲ್ಲಕ್ಕಿಯ ಗಂಗಸ್ಥಳ ಜರುಗಿತು. ಸಂಜೆ 6 ಗಂಟೆಗೆ ಅಗ್ಗಿ ಪ್ರವೇಶದ ಸ್ಥಳದ ಬಾಗಿಲು ತೆರೆಯುವ ಕಾರ್ಯಕ್ರಮ ದೇವಸ್ಥಾನದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಗ್ರಾಮದ ಪ್ರಮುಖರ ಸಮ್ಮುಖದಲ್ಲಿ ನಡೆಯಿತು.
ಜೂ.14 ರ ಶುಕ್ರವಾರದಂದು ಬೆಳಿಗ್ಗೆ ಮುತ್ತೈದೆಯರಿಂದ ಸುರಗಿ ಸುತ್ತಿಸಿದ ಬಳಿಕ ಅಗ್ಗಿಪುಟು ಕಾರ್ಯಕ್ರಮ ನಡೆಯಿತು. ನಂತರ ಚಂದ್ರಗಿರಿ ದೇವಿಯ ಉತ್ಸವ ಮೂರ್ತಿ ಹಾಗೂ ಕಾಳಿಕಾ ದೇವಿಯ ಉತ್ಸವ ಮೂರ್ತಿಗಳೆರಡು ಒಂದಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾರೆ. ಅಲ್ಲದೆ ಭಕ್ತರ ಮನೆಗಳ ಪ್ರವೇಶ ಮಾಡುವಾಗ ಭಕ್ತರು ತಮ್ಮ ಮನದ ಹರಕೆಗಳನ್ನು ತೀರಿಸಿಕೊಳ್ಳುತ್ತಾರೆ. ಚಂದ್ರಗಿರಿ ದೇವಿ, ಕಾಳಿಕಾ ದೇವಿಯರ ಉತ್ಸವ ಮೂರ್ತಿಯ ಜೊತೆಗೆ ಜಟ್ಟಿಂಗರಾಯ ದೇವರ ಪಲ್ಲಕ್ಕಿಯೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಇಡೀ ದಿನ ಮೆರವಣಿಗೆ ನಡೆಯಿತು.
ಸಂಜೆ 5 ಗಂಟೆಗೆ ಗ್ರಾಮದ ಪೆÇಲೀಸ್ ಪಾಟೀಲ ಹಾಗೂ ಮಾಲಿಪಾಟೀಲರ ಮನೆಯಿಂದ ಕುಂಭ ಕಳಶ ಬರುವ ಮೂಲಕ ಚಂದ್ರಗಿರಿ ದೇವಿ ಪ್ರಾಂಗಣದಲ್ಲಿನ ಅಗ್ನಿ ಪ್ರವೇಶಕ್ಕೆ ಸಿದ್ದತೆ ನಡೆದು ಪ್ರಧಾನ ಅರ್ಚಕರಾದ ರಾಹುಲ್ ಭಂಡಾರಿ ಅವರು ಅಗ್ಗಿ ಪ್ರವೇಶ ಮಾಡಿದ ಬಳಿಕ ಭಕ್ತರು ಕೂಡ ಅಗ್ಗಿ ಪ್ರವೇಶ ಮಾಡಿ ಚಂದ್ರಗಿರಿ ದೇವಿಗೆ ನಮಿಸಿ ಪುನೀತರಾದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ನಿಂಗಣ್ಣ ಕಲಶೆಟ್ಟಿ, ಪ್ರಮುಖರಾದ ಈರಣ್ಣಗೌಡ ನಾವದಗಿ, ರಾಜಶೇಖರ ಸರ್ವೋದಯ, ಅಂಬರೀಷ ಪಟ್ಟಣ, ಬಲಭೀಮ ಬಳೂಂಡಗಿ, ರಾಜುಸಾಹುಕಾರ ಜಿರೋಳಿ, ಶ್ರೀಶೈಲ ಸ್ಥಾವರಮಠ, ಚಂದ್ರಕಾಂತ ಸೀತನೂರ, ಬಾಬು ತಳವಾರ, ಮಲ್ಲಣ್ಣಗೌಡ ಮಾಲೀ ಪಾಟೀಲ, ಮನೋಹರ ಸಾಹುಕಾರ ಹಿಪ್ಪರಗಿ, ಶರಣಪ್ಪ ಕನ್ನೋಳಿ, ಚಂದ್ರಕಾಂತ ಸಿಂಗೆ, ರಾಣಪ್ಪ ಬಬಲಾದ, ಸಿದ್ದಪ್ಪ ಸಿಂಗೆ, ಶ್ರೀಮಂತ ಭಂಡಾರಿ, ಶಿವಯೋಗಿ ಸಿಂಗೆ, ಶೇಖರಗೌಡ ಪಾಟೀಲ, ದತ್ತು ಕಲಶೆಟ್ಟಿ, ದತ್ತು ಘಾಣೂರ, ಸಿದ್ದಣಗೌಡ ಪೆÇಲೀಸಪಾಟೀಲ, ಮಹಾಂತೇಶ ತಳವಾರ, ಗುಂಡುರಾವ ಮಾಳಗೆ, ಜಯನಂದ ನಾವಿ, ಯಲ್ಲಾಲಿಂಗ ಕೊಳ್ಳೂರ, ಚಂದ್ರಕಾಂತ ದೇವರಮನಿ, ರೇವಣಸಿದ್ದ ಕಲಶೆಟ್ಟಿ, ಮಲಕಣ್ಣ ಕೆರಮಗಿ, ಆರೆಪ್ಪ ಆನೂಕರಕರ್, ಸೇರಿದಂತೆ ಮಲ್ಲಾಬಾದ, ಬಿಲ್ವಾಡ, ದೇಸಾಯಿ ಕಲ್ಲೂರ, ಅಫಜಲಪುರ, ಮಾತೋಳಿ ಸೇರಿ ಅನೇಕ ಗ್ರಾಮಗಳ ಭಕ್ತರು ಭಾಗಿಯಾಗಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೆÇಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಬಂದ ಭಕ್ತರಿಗೆ ದೇವಸ್ಥಾನ ಕಮೀಟಿ ವತಿಯಿಂದ ಪ್ರಸಾದ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಲಾಯಿತು.