ಮಹಿಳಾ ಸಬಲೀಕರಣಕ್ಕಾಗಿ ಜ್ಞಾನವಿಕಾಸ  ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಸಿರುಗುಪ್ಪ: ತಾಲೂಕಿನಲ್ಲಿ 2024 -25 ನೇ ಸಾಲಿನಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಪೌಷ್ಟಿಕ ಆಹಾರ, ಕಾನೂನೂ ಅರಿವು, ಕೌಟುಂಬಿಕ ಸಾಮರಸ್ಯ, ಮಕ್ಕಳ ಶಿಕ್ಷಣ ಹಾಗೂ ವಿವಿಧ ಜ್ವಲಂತ ಸಮಸ್ಯೆಗಳ ಕುರಿತು ಮಾಹಿತಿ  ನೀಡುವ ಕ್ರಿಯಾಯೋಜನೆಯನ್ನು  ಅನುಷ್ಠಾನಗೊಳಿಸಲು ಕಾರ್ಯಗಾರ ಆಯೋಜನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕಾರ್ಯಕ್ರಮ ನಡೆಸಲಾಯಿತು.
ನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಯೋಜನೆಯ ಜಿಲ್ಲಾ ನಿರ್ದೇಶಕರಾದ ರೋಹಿತಾಕ್ಷ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಅವರು 50 ಮಹಿಳಾ ಸದಸ್ಯರನ್ನು ಒಳಗೊಂಡ 1 ಜ್ಞಾನವಿಕಾಸ ಕೇಂದ್ರದಂತೆ ತಾಲೂಕಿನಲ್ಲಿ 25 ಕೇಂದ್ರಗಳನ್ನು ನಿರ್ವಹಣೆ ಮಾಡಲು ಕೇಂದ್ರಕ್ಕೆ ಒಬ್ಬರಂತೆ ಜ್ಙಾನವಿಕಾಸ ಸಂಯೋಜಿಕಿಯರು ನಿಯೋಜಿಸಲಾಗಿದ್ದು ಈ ದಿನ ಕ್ರಿಯಾಯೋಜನೆ ಅನುಷ್ಠಾನಕ್ಕೆ ತರಬೇತಿ ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು,
ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿಗಳಾದ ಸುಧೀರ್ ಹಂಗಳೂರ್, ಜ್ಞಾನವಿಕಾಸ ಯೋಜನಾಧಿಕಾರಿಗಳಾದ  ಸುಧಾ, ತಾಲೂಕು ಜ್ಞಾನವಿಕಸ ಸಮನ್ವಯ ಅಧಿಕಾರಿ ಪ್ರಿಯ ಇದ್ದರು.