ವಿಶ್ವ ರಕ್ತದಾನಿಗಳ ದಿನಾಚರಣೆ
ಸಂಜೆವಾಣಿ ವಾರ್ತೆ
ಕೊಟ್ಟೂರು, ಜೂ.15  ಪಟ್ಟಣದ ಬಯಲು ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆಯಂದು ಜೆ ಸಿ ಐ ಕೊಟ್ಟೂರು ಕಾಟನ್  ಮತ್ತು ಸ್ವಾಮಿ ವಿವೇಕಾನಂದ ಬ್ಲಡ್ ಬ್ಯಾಂಕ್ ಹಗರಿಬೊಮ್ಮನಹಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯನಗರ ಇವರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಯುವಕರು  ಸ್ವ ಇಚ್ಛೆಯಿಂದ ಆಗಮಿಸಿ ರಕ್ತ ನೀಡಿದರು. ರಕ್ತ  ನೀಡಿದವರಿಗೆ ಜೆಸಿಐ ಕಡೆಯಿಂದ ಪ್ರಮಾಣ ಪತ್ರ ವಿತರಣಾ ಮಾಡಲಾಯಿತು.
 ಬೆಳಿಗ್ಗೆ 9 ಕ್ಕೆ  ಪ್ರಾರಂಭಗೊಂಡು ಸಂಜೆ 5 ಗಂಟೆಗೆ 83 ಯೂನಿಟ್ ರಕ್ತ ಸಂಗ್ರಹವಾಯಿತು.
ಈ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜೆ ಸಿ ಐ ನ ಅಧ್ಯಕ್ಷ ನಂದೀಶ್ ತುರ್ಕಾಣಿ ಮಾತಾನಾಡಿ ರಕ್ತದಾನ ಮಹಾದಾನ, ರಕ್ತದಾನ ಮಾಡಿ ಮತ್ತೊಬ್ಬರನ್ನು ರಕ್ತದಾನ ಮಾಡಲು ಪ್ರೇರೇಪಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕೊಟ್ಟೂರೇಶ್ವರ ಕಾಲೇಜ್ ನ ಪ್ರಾಚಾರ್ಯರಾದ ರವಿ ಕುಮಾರ್,  ಉಪನ್ಯಾಸಕರಾದ ಪ್ರಶಾಂತ್,  ಜೆಸಿ ವಿಕ್ರಂ, ಜೆಸಿ ಸಂತೋಷ್ ಅಟವಾಳಗಿ, ಈಶ್ವರಪ್ಪ ತುರಾಕಾಣಿ,  ರಾಘವೇಂದ್ರ, ಜೆಸಿ ಪ್ರಕಾಶ್, ಜೆಸಿಐ ಮಹಿಳಾ ಅಧ್ಯಕ್ಷರಾದ ಅನುಸೂಯ ಪ್ರಕಾಶ್, ಸೌಮ್ಯ ವಿಕ್ರಂ ನಿರ್ಮಲ ರೆಡ್ಡಿ, ವೀಣಾ ಚಂದ್ರು ಈಶ್ವರ ತುರಕಾಣಿ, ಸಕ್ರಪ್ಪ ರೆಡ್ಡಿ ಉಪನ್ಯಾಸಕರು ಉಪಸ್ಥಿತರಿದ್ದರು.
ಜೆಸಿಐ ವಾಣಿಯನ್ನು  ರಶ್ಮಿ ನಂದೀಶ ತುರ್ಕಾಣಿ ಪಠಿಸಿದರು.
ಪ್ರಾಸ್ತಾವಿಕವಾಗಿ ಡಾ. ಜಗದೀಶ್ ಚಂದ್ರ ಬೋಸ್ ಮಾತನಾಡಿದರು ವಂದನಾರ್ಪಣೆಯನ್ನು ವಿಕ್ರಂ ಅರ್ಪಿಸಿದರು.