ನಾಳೆ ಡಾ. ಹಂದ್ರಾಳ ರಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಯೋಗ ಶಿಬಿರ
ಸಂಜೆವಾಣಿ ವಾತೆ
ಹೊಸಪೇಟೆ, ಜೂ.15: ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ಬೆಳಿಗ್ಗೆ 5.15ರಿಂದ 7.15ರವರೆಗೆ ಪತಂಜಲಿ ಯೋಗ ಸಮಿತಿಯ ವಿಜಯನಗರ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಡಾ.ಎಸ್‌.ಬಿ.ಹಂದ್ರಾಳ ಅವರಿಂದ ವಿಶೇಷ ಯೋಗ ಶಿಬಿರ ನಡೆಯಲಿದೆ.
ಮಧುಮೇಹ, ಹೊಟ್ಟೆ ಬೊಜ್ಜು, ಉದರರೋಗ ಮೊದಲಾದ ಸಮಸ್ಯೆಗಳಿಗೆ ಯೋಗ, ಜೀವನ ಕ್ರಮದಿಂದ ಪರಿಹಾರ ಸೂತ್ರಗಳನ್ನು ಹೇಳಿಕೊಡಲಿದ್ದಾರೆ ಎಂದು ಪತಂಜಲಿ ಯೋಗ ಸಮಿತಿಯ ಯುವ ರಾಜ್ಯ ಪ್ರಭಾರಿ ಕಿರಣ್ ಕುಮಾರ್ ಜಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.