ಪಿಡಿಐಟಿ ಕಾಲೇಜಿನಲ್ಲಿ ರಕ್ತದಾನ ಶಿಬಿರ
ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ15: ರಾಷ್ಟ್ರೀಯ ಸೇವಾ ಯೋಜನಾ ಘಟಕ ಪಿಡಿಐಟಿ ಕಾಲೇಜು ಹಾಗೂ ಯೂತ್ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಹೊಸಪೇಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಅದ್ದೂರಿಯಾಗಿ ನಡೆಯಿತು.
ವಿಶ್ವ ರಕ್ತದಿನದ ಅಂಗವಾಗಿ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು ಪ್ರಾಚಾರ್ಯ ಡಾ.ಯು.ಎಂ.ರೋಹಿತ್ ಚಾಲನೆ ನೀಡಿ ಮಾತನಾಡಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನಕ್ಕೆ ಮುಂದಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ, ಇದು ನಮ್ಮ ದೇಹದ ಆರೋಗ್ಯದ ಜೊತೆ ಕ್ರೀಯಾಶೀಲವಾಗಿರುವಂತೆ ಮಾಡುತ್ತದೆ ಎಂದರು.
50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ರಕ್ತದಾನ ಮಾಡಿದರು. ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ರಕ್ತ ಸಂಗ್ರಹಣಾ ಘಟಕದ ವೈದ್ಯಾಧಿಕಾರಿ ಡಾ.ಸೋಮಶೇಖರ ಕಬ್ಬೆರ್ ನೇತೃತ್ವದಲ್ಲಿ ಡಾ.ಯುನೂಸ್ . ಡಿ ಜಗದೀಶ್ ಸಿದ್ಧೇಶ್ವರ್ ವೈದ್ಯರ ತಂಡ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಿದರು.
ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಯೋಜಕ ಪ್ರೋ ಬಸವರಾಜ ಆರ್, ಯೂತ್ ರೆಡ್ ಕ್ರಾಸ್‍ನ ಸಂಯೋಜಕ ಪ್ರೋ ನವೀನವವ ಎಸ್ ಹಾಗೂ ಪ್ರೋ ಮಂಜುನಾಥ ಎಸ್.ಹೆಚ್. ಡಾ.ನವೀನ್ ಆರ್ ಹಾಗೂ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ರಕ್ತದಾನಕ್ಕೆ ಪ್ರೇರಣೆ ನೀಡಿದರು.