ಕೃಷಿ ಭೂಮಿ ಉಳಿವಿಗಾಗಿ ಜೂ.17 ರಂದು ಜನ ಜಾಗೃತಿ ಜಾಥಾ  ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜೂ.15 ಪಟ್ಟಣ ಸೇರಿದಂತೆ ಸುತ್ತಮುತ್ತ ಗ್ರಾಮದ ಕೃಷಿ ಭೂಮಿ ಉಳಿವಿಗಾಗಿ ಜೂ.17 ರಂದು ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಗುವುದು ಎಂದು ಅಂದೋಲನದ ಸಂಚಾಲಕ ಬುಡ್ಡಿ ಬಸವರಾಜ್ ತಿಳಿಸಿದರು.
 ಪಟ್ಟಣದ ಕೃಷಿಕ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಹಿಂದೆ ಜಿಲ್ಲಾಧಿಕಾರಿ ತಾಲೂಕನ್ನು ಹಸಿರು ವಲಯವನ್ನಾಗಿ ಘೋಷಿಸಿದ್ದಾರೆ. ಆದರೆ ಅದು ಕಾರ್ಯರೂಪಕ್ಕೆ ಬಾರದೆ. ಎಲ್ಲಂದರೆ ಅಲ್ಲಿ ರಿಯಲ್ ಎಸ್ಟೇಟ್ ದಂಧೆಗಳು ಶುರುವಾಗಿದೆ. ಕೃಷಿಗೆ ಯೋಗ್ಯವಾದ ಭೂಮಿಯನ್ನು ಬಡಾವಣೆಗಳನ್ನು ಮಾಡುವುದು ಎಷ್ಟು ಸೂಕ್ತ. ಇದಕ್ಕೆ ಕಡಿವಾಣ ಹಾಕದಿದ್ದರೆ ರೈತರು ತಮ್ಮ ಭೂಮಿಯನ್ನು ಕಳೆದುಕೊಂಡು ಮುಂದಿನ ದಿನಗಳಲ್ಲಿ ಪಶ್ಚತಾಪ ಪಡಲಿದ್ದಾರೆ. ಆದ್ದರಿಂದ ರೈತರಲ್ಲಿ ಜಾಗೃತಿ ಮೂಡಿಸಲು ಈ ಒಂದು ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಧಿಕಾರಿಗಳು ತಾಲೂಕು ಕೇಂದ್ರದಿಂದ 10 ಕಿ.ಮೀ ಹಸಿರು ವಲಯವೆಂದು ಶೀಘ್ರ ಘೋಷಿಸಬೇಕು ಎಂದರು. ಜಾಗೃತಿ ಜಾತದ ಕಾರ್ಯಕ್ರಮ ಹಗರಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ ಕಾರ್ಯಕ್ರಮಕ್ಕೆ ಪ್ರಗತಿಪರ ಕೃಷಿಕ ವಿಶ್ವೇಶ್ವರ ಸಜ್ಜನ್ ಅವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
 ಈ ಸಂದರ್ಭದಲ್ಲಿ ಮುಖಂಡರಾದ ನಿವೃತ್ತ ಯೋಧ ರಾಮಿ ರೆಡ್ಡಿ, ಎಚ್ ದೊಡ್ಡಬಸಪ್ಪ, ಕಹಳೆ ಬಸವರಾಜ್, ಸುರೇಂದ್ರನಾಥ, ಎಂ ಶಿವರಾಜ್ ದಾದಮ್ಮನವರ ಬಸವರಾಜ್ ಲಿಂಗರಾಜ್ ಯಾದವ್, ಉಮೇಶ ಬಲ್ಲಾ ಹುಣಸಿ ನಾಗರಾಜ, ಒಂಟಿಗೋಡಿ ವೀರೇಶ್ ಶಾಂತಪ್ಪ,ದಾದು, ಹನುಮಂತಪ್ಪ, ಪೂಜಾರಿ ಸಿದ್ದಪ್ಪ ಬಸವ ರೆಡ್ಡಿ ಇತರರಿದ್ದರು