ಹಿರಿಯ ಪತ್ರಕರ್ತಮತ್ತಿಹಳ್ಳಿ ಮದನ ಮೋಹನ ನಿಧನ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.15: ಹಿರಿಯ ಪತ್ರಕರ್ತ ಮತ್ತಿಹಳ್ಳಿ ಮದನ ಮೋಹನ ನಿಧನ ಇಂದು ಬೆಳಿಗ್ಗೆ ಹುಬ್ಬಳ್ಳಿಯಲ್ಲಿ ಕೊನೆಯುಸಿರೆಳೆದಿದ್ದಾರೆ.
‘ ಹಿಂದು’ ಪತ್ರಿಕೆಯ ಹಿರಿಯ ವರದಿಗಾರರಾಗಿ ಸುಮಾರು ನಾಲ್ಕು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮದನ ಮೋಹನ ಕಾರ್ಯವ್ಯಾಪ್ತಿ ಕರ್ನಾಟಕದ ಕಲಬುರಗಿ, ಬೀದರಗಳಿಂದ ಹಿಡಿದು ಕಾರವಾರ ಗೋವಾವರೆಗೆ ಇತ್ತು.ಕರ್ನಾಟಕದ ನೆಲ,ಜಲ ,ರಾಜಕಾರಣ ಮುಂತಾದ ವಿಷಯಗಳ ಬಗ್ಗೆ ಅಪಾರ ಅಧ್ಯಯನ ಮಾಡಿದ್ದ ಮದನ ಮೋಹನ ವಿಶ್ವಕೋಶದಂತೆ ಇದ್ದರು. ಹಿರಿಯ ನಾಯಕರಾದ ಸಚಿವರಾಗಿದ್ದ ಎಸ್. ಆರ್.ಬೊಮ್ಮಾಯಿ,ಎಚ್.ಕೆ.ಪಾಟೀಲರು ಅನೇಕ ವಿಷಯಗಳಲ್ಲಿ ಇವರ ಸಲಹೆ ಪಡೆಯುತ್ತಿದ್ದರು. ಅವರ ಅಗಲಿಕೆಯಿಂದ ಕರ್ನಾಟಕದ ಮಾಧ್ಯಮ ಲೋಕ ಒಬ್ಬ ಅಪರೂಪದ ಪತ್ರಕರ್ತ ನನ್ನು ಕಳೆದುಕೊಂಡಂತಾಗಿದೆ. ಬಳ್ಳಾರಿಯ ನಿವೃತ್ತ ಪತ್ರಕರ್ತ ಎಂ.ಅಹಿರಾಜ್ ಅವರ ಚಿಕ್ಕಪ್ಪ.