ಹೈಕೋರ್ಟ್ ನ್ಯಾಯಾಧೀಶರಿಗೆ ಪತ್ರ ಚಳುವಳಿ ನಡೆಸಲು ಭೂ ಸಂತ್ರಸ್ತ ಹೋರಾಟ ಸಮಿತಿ‌ ನಿರ್ಧಾರ
(ಸಂಜೆವಾಣಿ ಪ್ರತಿನಿಧಿಯಿಂದ)
 ಬಳ್ಳಾರಿ, ಜೂ.15: ಕಳೆದ ಒಂದು ವರ್ಷಕ್ಕಿಂತಲ್ಲೂ ಹೆಚ್ಚು ದಿನಗಳಿಂದ ತಾಲೂಕಿನ‌ ಕುಡುತಿನಿಯಲ್ಲಿ  ಭೂ ಸಂತ್ರಸ್ತ ರೈತರು ನಡೆಸುತ್ತಿರುವ ಹೋರಾಟಕ್ಕೆ ಜನಪ್ರತಿನಿಧಿಗಳು, ಆಧಿಕಾರಿಗಳು ಸ್ಪಂದಿಸದ ಕಾರಣ ಕೆಪಿಆರ್ ಎಸ್ ಮತ್ತು ಸಿಐಟಿಯು ನೇತೃತ್ವದಲ್ಲಿ ಹೋರಾಟಗಾರರ ಸಮಿತಿ  ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ತಮಗೆಚನ್ಯಾಯ ಒದಗಿಸಬೇಕೆಂದು  ಪತ್ರ ಚಳುವಳಿ ನಡೆಸಲು ತೀರ್ಮಾನಿಸಿದೆ.
ನಗರದಲ್ಲಿ ನಿನ್ನೆ ಸುದ್ದಿಗೋಷ್ಟಿ ನಡೆಸಿದ ಕೆಪಿಆರ್ ಎಸ್ ನ ಯು.ಬಸವರಾಜ್ ಮತ್ತು ಸಿಐಟಿಯು ಜೆ.ಸತ್ಯಬಾಬು ಮೊದಲಾದವರು. ಚಳುವಳಿಯ ಭಾಗವಾಗಿ ರೈತರಿಂದ ಪತ್ರವನ್ನು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ  ಬರೆದು ಹಾಕಲಿದೆ. ಅದಾದ ನಂತರ  ಜುಲೈ ತಿಂಗಳ ಎರಡನೇ ವಾರದಲ್ಲಿ  ಒಂದು ದನ  ಸಂಪೂರ್ಣ ಕುಡುತಿನಿ ಬಂದ್ ಮಾಡಲು, ಬಳಿಕ ಬಳ್ಳಾರಿ ಜಿಲ್ಲೆಯನ್ನು ಒಂದು ದಿನ ಬಂದ್ ಮಾಡುವ ಮುಖಾಂತರ ಸರ್ಕಾರದ ಗಮನ ಸೆಳಿಯಲು ನಿರ್ಧರಿಸಿದೆಂದು ತಿಳಿಸಿದ್ದಾರೆ.
ಬಳ್ಳಾರಿ ತಾಲೂಕಿನ  ಕುಡಿತಿನಿ, ಹರಗಿನಡೋಣಿ, ಜಾನೇಕುಂಟೆ, ವೇಣಿ ವೀರಾಪುರ, ಕೊಳಗಲ್ಲು, ಯಾರಂಗಳಿ, ಸಿದ್ದಮ್ಮನಹಳ್ಳಿ ಭಾಗದಲ್ಲಿ ಕಳೆದ 14 ವರ್ಷ ಗಳ ಹಿಂದೆ ಆರ್ಷಲ್ ಮಿತ್ತಲ್,
ಏನ್ ಎಂ ಡಿ ಸಿ, ಉತ್ತಮ ಗಾಲ್ವಾ ಕಂಪನಿ (ಬ್ರಹ್ಮಿಣಿ)ಗಾಗಿ ಸುಮಾರು 12500 ಎಕರೆ ಕೃಷಿ ಭೂಮಿಯನ್ನು ರೈತರಿಂದ
ಕೆಐಡಿಬಿ ಮುಖಾಂತರ 5 ಲಕ್ಷ 8 ಲಕ್ಷ 16 ಲಕ್ಷ ನೀಡಿ ಭೂಮಿಯನ್ನು ಸರ್ಕಾರ ವಶ ಪಡಿಸಿಕೊಂಡಿದ್ದು ರೈತರು ಭೂಮಿಗೆ ಸರ್ಕಾರ ಮೋಸದ ಬೆಲೆಯನ್ನು ನೀಡಿದ್ದಾರೆ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ರೈತರು ನ್ಯಾಯ ಕೇಳಿದ್ದು ಒಂದು ಎಕರೆ ಗೆ ರೂ 30 ಲಕ್ಷ 20 ಸಾವಿರ ಧರ ವನ್ನು ನಿಗಿದಿ ಮಾಡಿದ್ದು.  ಅಲ್ಲಿಂದ ಬಡ್ಡಿ ಮತ್ತು ಸೆಲ್ಯೂಷನ್ ನೀಡಬೇಕೆಂದು ನ್ಯಾಯಲಯ ತೀರ್ಪು ನೀಡಿದೆ.
ರೈತರಗೆ ನ್ಯಾಯಾಲಯದ ತೀರ್ಮಾನ ಜಾರಿ ಮಾಡಲಾಗದೆ ನ್ಯಾಯಾಲಯ ತೀರ್ಪಿನಂತೆ ಸರ್ಕಾರ ಕಂಪನಿ ಅವರಿಂದ ರೈತರಗೆ ನ್ಯಾಯವಾದ ಭೂ ಬೆಲೆ ನೀಡಬೇಕೆಂದು  ಕಳೆದ 544 ದಿನಗಳಿಂದ ಹೋರಾಟ ಮಾಡುತ್ತಾ ಬಂದಿದೆ. 
 ಮುಖ್ಯಮಂತ್ರಿಗಳ ಜೊತೆ ಮತ್ತು ಕೈಗಾರಿಕಾ ಮಂತ್ರಿ ಎಂಬಿ ಪಟೇಲ್ ಅವರ ಜೊತೆ ಕಳೆದ ವರ್ಷ ಡಿಸೆಂಬರ್ 14ರಂದು ಜಂಟಿ ಸಭೆಯಾಗಿದ್ದು ಮೂರು ತಿಂಗಳು ಕಾಲಾವಕಾಶ ಕೇಳಿ ರೈತರಿಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದರು.
ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳು ಆಗಿರುವಂತ  ಗೊಯಲ್ ಅವರು ಜೊತೆ ಚರ್ಚೆ ಮಾಡಿದ್ದು ರೈತರ ಪರವಾಗಿ ನ್ಯಾಯ ಕೊಡಿಸುವುದಕ್ಕೆ ಸರ್ಕಾರ ಮುಂದಾಗುತ್ತೆ ಎಂದು ಭರವಸೆ ನೀಡಿದ್ದರು. ಬಳ್ಳಾರಿ ಜಿಲ್ಲೆಯಲ್ಲಿರುವ ಎಲ್ಲಾ ಶಾಸಕರಿಗೂ ಹಲವು ಬಾರಿ ಮನವಿಯನ್ನು ಕೊಟ್ಟು ಸಮಸ್ಯೆ ಪರಿಹಾರದ ಬಗ್ಗೆ ಗಮನ ನೀಡಲು ಒತ್ತಾಯಿಸಲಾಗಿತ್ತು ಆದರೆ ಇಲ್ಲಿವರೆಗೂ ಯಾವುದೇ ಸರ್ಕಾರ ದಲ್ಲಿ ರೈತರ ಪರವಾದ ನೀತಿ ಜಾರಿ ಮಾಡದೇ ವಿಳಂಬ ಮಾಡಿದ ಹಿನ್ನಲೆಯಲ್ಲಿ ಈ ಹೋರಾಟಕ್ಕೆ ನಿರ್ಧರಿಸಿದೆಂದು ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ವಿ. ಎಸ್. ಶಿವಶಂಕರ, ಎ. ಸ್ವಾಮಿ ಎಂ.ತಿಪ್ಪೇಸ್ವಾಮಿ, ಜಂಗ್ಲಿ ಸಾಬ್, ಅಂಜಿನಪ್ಪ, ಗೋಪಿ ವೇಣಿ ವೀರಾಪುರ, ದಮ್ಮೂರ್ ಗಂಗಾಧರ್, ಸುರೇಶ್ ಗೌಡ ಹರಗಿನದೋಣಿ, ಬಸವರಾಜ್ ಗೌಡ ಜಾನೆಕುಂಟೆ, ಬಿಳಿಬಾಯಪ್ಪ ಮೊದಲಾದವರು ಇದ್ದರು.