ಕೆಬಿಎನ್ ಆಸ್ಪತ್ರೆ : ರಕ್ತದಾನ ಶಿಬಿರ
ಕಲಬುರಗಿ :ಜೂ.15: ನಗರದ ಸುಪ್ರಸಿದ್ದ ಖಾಜಾ ಬಂದಾನವಾಜ ಬೋಧನೆ ಮತ್ತು ಸಾರ್ವಜನಿಕ ಆಸ್ಪತ್ರೆ ಹಾಗೂ ರಾಷ್ಟ್ರೀಯ ಮಾನವ ಅಭಿವೃದ್ಧಿ(ರಮಾ) ಸಹಯೋಗದಲ್ಲಿ ಶುಕ್ರವಾರ ರಕ್ತದಾನಿಗಳ ದಿನದ ಅಂಗವಾಗಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಮೆಡಿಕಲ್ ಡೀನ್ ಡಾ. ಸಿದ್ದೇಶ ಶಿರವಾರ ಮಾತನಾಡುತ್ತ, ರಕ್ತದಾನಿಗಳು ನಿಜವಾದ ನಾಯಕರು. ರಕ್ತದಾನಿಗಳ ಪರ ಮೆಚ್ಚುಗೆ ವ್ಯಕ್ತಪಡಿಸಿದರು. ರಕ್ತವನ್ನು ಉತ್ಪಾದನೆ ಮಾಡಲಾಗದು. ಮನುಷ್ಯರೇ ರಕ್ತವನ್ನು ದಾನಮಾಡಬೇಕು. ಯುವಕರು ಹೆಚ್ಚು ರಕ್ತದಾನ ಮಾಡಿ ಜೀವದಾನ ಮಾಡಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ರಮಾ ಫೌಂಡೇಶನ ಕಾರ್ಯದರ್ಶಿ ಶ್ವೇತಾ ಇಟಗಿ ರಕ್ತದ ಮಹತ್ವದ ಬಗ್ಗೆ ತಿಳಿ ಹೇಳಿದರು.
ಸುಮಾರು 30 ಜನ ರಕ್ತದಾನ ಮಾಡಿದರು.
ಕೆಬಿಎನ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಕ್ತದಾನಿಗಳ ದಿನದ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಗಳ ವಿಜೇತರಾದ ರೋಹನ್ ಸಿಂಗ್, ಅಫ್ರಾ ಆದನ್ Àುತ್ತು ಫಹೀಮಾ ಇನಾರಾ? ವೈಭವಿ ಮತ್ತು ಸಂಜನಾ, ಐಶ್ವರ್ಯ ಮತ್ತು ವೈಷ್ಣವಿ ಇವರಿಗೆ ಬಹುಮಾನ ವಿತರಿಸಲಾಯಿತು.
ಮೆಡಿಕಲ್ ಸೂಪರಿಟೆಂಡೆಂಟ್ ಡಾ. ಸಿದ್ದಲಿಂಗ ಚೆಂಗಟಿ, ಆಡಳಿತಧಿಕಾರಿ ಮತ್ತು ರಿಜಿಸ್ಟ್ರಾರ ಡಾ. ರಾಧಿಕಾ, ರಮಾ ಫೌಂಡೇಶನ್ ಅಧ್ಯಕ್ಷ ಮತ್ತು ಸಂಸ್ಥಾಪಕ ಡಾ. ಪ್ರತಾಪ ಸಿಂಗ್ ತಿವಾರಿ, ರೋಗಶಾಸ್ತ್ರದ ವಿಭಾಗದ ಮುಖ್ಯಸ್ಥೆ ಡಾ. ಮಂದಾಕಿನಿ ಟೆಂಗಳಿ, ರೋಗಶಾಸ್ತ್ರ ವಿಭಾಗದ ಅಸೋಸಿಯೇಟ್ ಪೆÇ್ರಫೆಸರ ಮತ್ತು ಬ್ಲಡ್ ಬ್ಯಾಂಕ್ ವೈದ್ಯಕೀಯ ಅಧಿಕಾರಿ ಡಾ. ಗೀತಾಂಜಲಿ ಜೀವಣಗಿ, ಹಾಗೂ ಎಚ್ ಡಿ ಎಫ್ ಸಿ ಶಾಖಾ ವ್ಯವಸ್ಥಾಪಕ ಅವಿನಾಶ ಕುಮಾರ ಮುಂತಾದವರು ಹಾಜರಿದ್ದರು.