ಗಂಗಾಂಬಿಕಾ ಮಾತೆಗೆ ಪೂಜೆ
ಚನ್ನಮ್ಮನ ಕಿತ್ತೂರು,ಜೂ 15: ಪ್ರಧಾನಿಯಾಗಿ ನರೇಂದ್ರ ಮೋದಿ 3ನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆ ತಾಲೂಕಿನ ಎಂ ಕೆ ಹುಬ್ಬಳ್ಳಿ ಮಲಪ್ರಭಾ ನದಿ ದಡದಲ್ಲಿರುವ ಶ್ರೀ ಶರಣೆ ಗಂಗಾಂಬಿಕಾ ಮಾತೆಗೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಪೂಜೆ ಸಲ್ಲಿಸಿದರು.
ನಂತರ ಮೈತ್ರಿ ಕೂಟದ ಮುಖಂಡ ಅಶೋಕ ಹಲಕಿ ಮಾತನಾಡಿ ನರೇಂದ್ರ ಮೋದಿಯವರ ದಕ್ಷ ಆಡಳಿತ ಹಾಗೂ ಜನಪರ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ಮತದಾರರು ಮತ್ತೋಮ್ಮೆ ಬಿಜೆಪಿ ಜಯಗಳಿಸುವಂತೆ ಮಾಡಿದ್ದಾರೆ ಎಂದರು.
ಈ ವೇಳೆ ಕಲ್ಲಪ್ಪ ಕಾದ್ರೋಳ್ಳಿ, ಪಾರೀಸ್ ಅಗಸಿಮನಿ, ಹುಮಾಯೂನ್, ಮಹೇಶ ಹುದಲಿ, ಬಸವರಾಜ ಅವರಾದಿ, ಶಂಕರ ಕಮತಗಿ, ಸೇರಿದಂತೆ ಹಲವಾರು ಕಾರ್ಯಕರ್ತರಿದ್ದರು.