ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ
ಕೊಲ್ಹಾರ:ಜೂ.15: ಕಾನೂನಿನ ನಿಯಮಗಳನ್ನು ಪಾಲನೆ ಮಾಡುವ ಮೂಲಕ ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರಿ?ದ್ ಹಬ್ಬದವನ್ನು ಅಚ್ಚುಕಟ್ಟಾಗಿ ಆಚರಣೆ ಮಾಡಬೇಕು ಎಂದು ಪಿಎಸ್‍ಐ ಪ್ರವೀಣ ಗರೆಬಾಳ ಹೇಳಿದರು.
ಪಟ್ಟಣದ ಪೆÇಲೀಸ ಠಾಣೆಯಲ್ಲಿ ಬಕ್ರಿದ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಶಾಂತಿಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಸರ್ವರು ಶಾಂತಿಯುತವಾಗಿ ಹಬ್ಬವನ್ನು ಆಚರಣೆ ಮಾಡಬೇಕು, ಸರ್ಕಾರ ವಿಧಿಸಿರುವ ನಿಯಮಗಳನ್ನ ಪಾಲನೆ ಮಾಡಬೇಕು ಎಂದು ಅವರು ಪುನರುಚ್ಚರಿಸಿದರು.
ಮುಖಂಡರಾದ ಆರ್.ಬಿ ಪಕಾಲಿ, ಉಸ್ಮಾನ್ ಪಟೇಲ ಖಾನ್, ಮಹೇಶ ತುಂಬರಮಟ್ಟಿ, ಸಲೀಮ ಕೊತ್ತಲ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಆರ್.ಬಿ ಪಕಾಲಿ, ಉಸ್ಮಾನ್ ಪಟೇಲ ಖಾನ್, ದಶರಥ ಈಟಿ, ಮಹೇಶ ತುಂಬರಮಟ್ಟಿ, ಸಲೀಮ ಕೊತ್ತಲ್, ಸಿಡ್ಲಪ್ಪ ತಳಗೇರಿ, ತಿಪ್ಪಣ್ಣ ಕುದರಿ, ಗೈಬು ಕಂಕರಪೀರ ಹಾಗೂ ಇನ್ನಿತರರು ಇದ್ದರು.