ವಿ.ಎಸ್.ಎಸ್.ಎನ್ ಅಧ್ಯಕ್ಷರಾಗಿ ಉದಯಶಂಕರ್ ಆಯ್ಕೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.15: ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಆನೆಗೊಳ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಉದಯ್ ಶಂಕರ್ ರವರು ಅವಿರೋಧವಾಗಿ ಆಯ್ಕೆಯಾದರು.
ಆನೆಗೊಳ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತೆರವಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷರ ಸ್ಥಾನಕ್ಕೆ ಕರ್ನಾಟಕ ರಾಜ್ಯ ಸಹಕಾರ ಮಂಡಲಿಯ ನಿರ್ದೇಶಕರಾದ ಪುಟ್ಟಸ್ವಾಮಿಗೌಡರ ಮಾರ್ಗದರ್ಶನದಂತೆ ಐಕನಹಳ್ಳಿ ಗ್ರಾಮದ ಉದಯ್‍ಶಂಕರ್ ರವರನ್ನು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಗಳು ಉದಯ್‍ಶಂಕರ್‍ರವರನ್ನು ನೂತನ ಅಧ್ಯಕ್ಷರಾಗಿ ಘೋಷಿಸಿದರು.
ಇದೇ ಸಂಧರ್ಭದಲ್ಲಿ ನೂತನ ಅದ್ಯಕ್ಷರಾದ ಉದಯಶಕಂಕರ್ ಮಾತನಾಡಿ ಸರ್ವ ನಿರ್ದೇಶಕರ ಸಹಕಾರದೊಂದಿಗೆ ಸಂಘದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. ನೂತನ ಅಧ್ಯಕ್ಷರಿಗೆ ಬೆಂಬಲಿಗರು ಹಾಗೂ ಹಿತೈಷಿಗಳು ಸಿಹಿ ತಿನಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸಹಕಾರ ಮಹಾ ಮಂಡಲಿಯ ನಿರ್ದೇಶಕ ಪುಟ್ಟಸ್ವಾಮಿಗೌಡ, ಹೇಮಾವತಿ ಸಕ್ಕರೆ ಕಾರ್ಖಾನೆಯ ಮಾಜಿ ನಿರ್ದೇಶಕ ಬಿ.ಎಸ್.ಮಂಜುನಾಥ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಐಕನಹಳ್ಳಿ ಕೃಷ್ಣೇಗೌಡ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರಾದ ಐನೋರಹಳ್ಳಿ ಮಲ್ಲೇಶ್, ಜೆ.ಡಿ.ಎಸ್ ಯುವಘಟದ ಹೋಬಳಿ ಅಧ್ಯಕ್ಷ ಕೆ.ಆರ್.ವೆಂಕಟೇಶ್, ಗ್ರಾಮ ಪಂಚಯಿತಿ ಅದ್ಯಕ್ಷೆ ಮಹಾಲಕ್ಷಿವಿಶ್ವನಾಥ್, ಉಪಾದ್ಯಕ್ಷರಾದ ನಂಜೇಶ್, ಮಾಜಿ ಉಪಾದ್ಯಕ್ಷ ರಮೇಶ್, ಮುಖಂಡರಾದ ದೇವರಾಜು, ನಾಗೇಶ್, ಬಿ.ರಾಮೇಗೌಡ, ನಂಜುಂಡೇಗೌಡ, ಶಿಶುಪಾಲ, ಐಕನಹಳ್ಳಿ ದೇವೇಗೌಡ, ಐನೋರಹಳ್ಳಿ ಮಂಜು, ಕೃಷಿ ಪತ್ತಿನ ಸಹಕಾರ ಸಂಘದ ಎಲ್ಲಾ ನಿರ್ದೇಶಕರು, ಕಾರ್ಯದರ್ಶಿ ಪ್ರಶಾಂತ್ ಸೇರಿದಂತೆ ನೂರಾರು ಗ್ರಾಮಸ್ಥರುಗಳು, ಮುಖಂಡರು ಹಾಜರಿದ್ದರು.