ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ಮೂಲಗೆ ಅವರನ್ನು ನೇಮಕ ಮಾಡಲು ಮನವಿ
ಕಲಬುರಗಿ,ಜೂ.15- ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ನೀಲಕಂಠರಾವ ಮೂಲಗೆ ಅವರನ್ನು ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ, ಪಕ್ಷವನ್ನು ಬಲವರ್ಧನೆಗೆ ಶಕ್ತಿ ತುಂಬುವಂತೆ ಜೈ ಕನ್ನಡಿಗರ ಸೇನೆ ಸಂಸ್ಥಾಪಕ ಅಧ್ಯಕ್ಷ ದತ್ತು ಹೆಚ್. ಭಾಸಗಿ ಅವರು ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ.
ಪಕ್ಷದ ನಿಷ್ಟವಂತ ಕಾರ್ಯಕರ್ತರಾಗಿರುವ ನೀಲಕಂಠರಾವ ಮೂಲಗೆ ಅವರು, ಕಳೆದ 2013 ಮತ್ತು 2018 ರ ವಿಧಾನ ಸಭೆ ಚುನಾವಣೆ ಅಲ್ಲದೇ 2023 ವಿಧಾನ ಸಭೆ ಚುನಾವಣೆ ಮೂರು ಬಾರಿ ಕಲಬುರ್ಗಿ ದಕ್ಷಿಣ ಮತ್ಚೆತ್ರದ ವಿಧಾನ ಸಭೆ ಚುನಾವಣೆಯಲ್ಲಿ ಹಗಲ್ ಇರಳು ದುಡುದಿದ್ದಾರೆ. ಮತ್ತು 2009ಲೋಕ ಸಭೆ ಚುನಾವಣೆ 2014, 2019, ಇದೇ 2024 ಲೋಕ ಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಪ್ರಮಾಣಿಕ ಕೆಲಸ ಮಾಡಿದ್ದಾರೆ.
ಹಗಲು ರಾತ್ರಿ ಎನ್ನದೇ ದುಡ್ದುದಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯರಾಗಿ ಆಗಿ ಪಕ್ಷದ ನಿಷ್ಠಾವಂತ ಕಾರ್ಯರತರಾಗಿ ಕಲಬುರ್ಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷದ ಬಲವರ್ಧನೆಗೆ ಶ್ರಮಿಸಿರುವ ಅವರಲ್ಲಿ ಪಕ್ಷವನ್ನು ಸಂಘಟಿಸುವ ಸಾಕಷ್ಟು ಅನುಭವ ಹೊಂದಿದ್ದಾರೆ.
ನೀಲಕಂಠ ಮೂಲಗೆ ಅವರು ಪಕ್ಷದ ಎಲ್ಲ ನಾಯಕರೊಂದಿಗೆ ಒಳ್ಳೆಯ ಸಂಬಂಧ ಹೊಂದಿದ್ದು, ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ. ಹೀಗಾಗಿ ಅವರನ್ನು ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಲ್ಲಿ ಪಕ್ಷಕ್ಕೆ ಆನೆ ಬಲ ಬರಲಿದೆ ಎಂದು ಅವರು ಹೇಳಿದ್ದಾರೆ.
ಇಲಗಲ್ಲಿಯವರೆಗೆ ಪಕ್ಷದಲ್ಲಿ ಯಾವುದೇ ಅಧಿಕಾರ ಅಥವಾ ಹುದ್ದೆಗೆ ಆಸೆ ಪಡದೆ ಸಕ್ರೀಯವಾಗಿ ಪಕ್ಷದ ಕೆಲಸವನ್ನು ನಿಭಾಯಿಸುತ್ತಾ ಬಂದಿರುತ್ತಾರೆ. ಇಂತಹ ನಿಷ್ಠ್ಠವಂತ ಕಾರ್ಯಕರ್ತರಾದ ನೀಲಕಂಠರಾವ ಮೂಲಗೆ ಅವರನ್ನು ಕಲಬುರಗಿ ಜಿಲ್ಲೆಯ ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿವಂತೆ ಪಕ್ಷದ ಎಲ್ಲಾ ಹಿರಿಯ ಹಿರಿಯ ನಾಯಕರಲ್ಲಿ ದತ್ತು ಭಾಸಗಿ ಅವರು ಮನವಿ ಮಾಡಿದ್ದಾರೆ.