ಸಿದ್ಧರಾಮಯ್ಯ ರಾಜೀನಾಮೆ ನೀಡದಿದ್ದರೆ ಸರ್ಕಾರ ವಜಾಗೊಳಿಸಿ ರಾಜ್ಯಪಾಲರಿಗೆ ಮನವಿ
ಬೀದರ:ಸೆ.25: ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಪತ್ನಿಯ 14 ಮುಡಾ ಸೈಟಗಳನ್ನು ಹಂಚಿಕೆ ಮಾಡಿರುವ ಪ್ರಕರಣಕ್ಕೆ ತಾವು ಸೆಕ್ಷನ್ 17ಎ ಅಡಿಯಲ್ಲಿ ತನಿಖೆ ನಡೆಸಲು ಅನುಮತಿ ನೀಡಿರುತ್ತೀರಿ. ಅದಾದ ತಕ್ಷಣವೆ ರಾಜೀನಾಮೆ ಸಲ್ಲಿಸಬೆಕಾಗಿದ್ದೆ ಸಿದ್ದರಾಮಯ್ಯನವರು ಹೈಕೊರ್ಟನ ಕದ ತಟ್ಟಿರುತ್ತಾರೆ. ಇಂದು ಹೈಕೊರ್ಟಿನ ನ್ಯಾಯಾಧೀಶರು ಅವರ ಅರ್ಜಿಯನ್ನು ವಜಾಗೊಳಿಸಿದ್ದು ತಕ್ಷಣವೆ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೆಕಾಗಿದ್ದ ಸಿದ್ಧರಾಮಯ್ಯನವರು ಇನ್ನು ಕಾನೂನು ಹೊರಾಟ ಮಾಡುವುದಾಗಿ ಕಾಲಹರಣ ಮಾಡುತ್ತಿದ್ದಾರೆ,À ಮುಡಾ ಹಗರಣ ಸೇರಿದಂತೆ, ವಾಲ್ಮೀಕಿ ಹಗರಣ ಕೆಐಡಿಬಿ ಹಗರಣ ಹಾಗು ಇನ್ನಿತರ ಹಲವು ಹಗರಣಗಳ ಸುಳಿಯಲ್ಲಿ ನೆಲುವಕೊಂಡಿರುವ ಸಿದ್ಧರಾಮಯ್ಯನವರು ಕೂಡಲೆ ರಾಜೀನಾಮೆ ನೀಡದಿದ್ದರೆ ಈ ಭ್ರಷ್ಟ ಸರ್ಕಾರವನ್ನು ವಜಾಗೊಳಿಸಬೇಕೆಂದು ಇಂದು ಭಾರರೀಯ ಜನತಾ ಪಕ್ಷದ ವತಿಯಿಂದ ಜಿಲ್ಲಾಧ್ಯಕ್ಷರಾದ ಸೋಮನಾಥ ಪಾಟೀ¯ ಅವರ ನೇತ್ರತ್ವದಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಮಾಜಿ ಕೇಂದ್ರ ಮಂತ್ರಿ ಭಗವಂತ ಖೂಬಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿರಪ್ಪಾ ಯರನಳ್ಳಿ, ಜಿಲ್ಲಾ ಉಪಾಧ್ಯಕ್ಷರಾದ ವಿಜಯಕುಮಾರ ಪಾಟೀಲ ಗಾದಗಿ, ಈಶ್ವರಸಿಂಗ ಠಾಕೂರ, ಶಶಿ ಹೋಸಳಿ,?? ದೀಪಕ ಗಾದಗೆ , ವಿಕ್ರಮ ಮುದಾಳೆ, ಲುಂಬಿಣಿ ಗೌತಮ, ಸಂಗಮೇಶ ನಾಸಿಗರ, ರಾಜಶೇಖರ ನಾಗಮೂರ್ತಿ, ಶ್ರೀಕಾಂತ ಪಾಂಡ್ರೆ, ಶ್ರೀನಿವಾಸ ಚೌಧರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.