ಜಗಳೂರು ಪಟ್ಟಣ ಪಂಚಾಯಿತಿ ಅಭಿವೃದ್ಧಿಗೆ ಬದ್ದ
ಸಂಜೆವಾಣಿ ವಾರ್ತೆ
ಜಗಳೂರು.ಸೆ.೨೫; ಮನೆ ಮನೆಗೆ ಪಟ್ಟಣ ಪಂಚಾಯಿತಿ ಕಾರ್ಯಕ್ರಮವನ್ನು ಪಟ್ಟಣದ ದೊಡ್ಡ ಮಾರಿಕಾಂಬ ದೇವಸ್ಥಾನದ ಆವರಣದಲ್ಲಿ ಶಾಸಕ ಬಿ. ದೇವೇಂದ್ರಪ್ಪ ಚಾಲನೆ ನೀಡಿದರು ನಂತರ ಮಾತನಾಡಿ ನಾನು ಶಾಸಕನಾಗಿದ್ದಾಗ ಪಟ್ಟಣ ಪಂಚಾ ಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಇರಲಿಲ್ಲ ಹಾಗಾಗಿ ನನ್ನ ಇದು ಮೂರನೇ ಕಾರ್ಯಕ್ರಮವಾಗಿದೆ, ರಾಜ್ಯದಲ್ಲಿಯೇ ಹೊಸತನದ ಯೋಜನೆಯನ್ನು ರೂಪಿಸಿರುವುದು ತುಂಬಾ ಒಳ್ಳೆಯ ವಿಷಯ ವಾಗಿದೆ ಮುಖ್ಯಮಂತ್ರಿ ಗಳಿಂದ ಜಗಳೂರು ವಿಧಾನ ಸಭಾ ಕ್ಷೇತ್ರಕ್ಕೆ 25 ಕೋಟಿ ಅನುಧಾನ ನೀಡಿದ್ದು, ಅದರಲ್ಲಿ ಜಗಳೂರು ಪಟ್ಟಣ ಪಂಚಾಯಿತಿ ಅಭಿವೃದ್ಧಿಗೆ 8 ಕೋಟಿ ಮೀಸಲಿರಿಸಿದ್ದೇನೆ . ಮನೆ ಮನೆಗೆ ಪಟ್ಡಣ ಪಂಚಾಯಿತಿ ಕಾರ್ಯಕ್ರಮ ಪಟ್ಟಣದ 18 ವಾರ್ಡ್ ಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ,ಎಲ್ಲಾ ವಾರ್ಡ್ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ. ಕೇವಲ ಉದ್ಘಾಟನೆಗೆ ಸೀಮಿತ ವಾಗಬಾರದು ಇದು ನಿರಂತರ ವಾಗಿ ಕೆಲಸವನ್ನುಮಾಡಬೇಕೆಂದು ತಿಳಿಸಿದರು.ಇ-ಸ್ವತ್ತಿನ ಸಮಸ್ಯೆ ಕೇವಲ ಬರಿ ಪಟ್ಟಣ ಪಂಚಾಯಿತಿದ್ದಲ್ಲ ಗ್ರಾಮ ಪಂಚಾಯಿತಿ ಮಟ್ಡದಲ್ಲಿಯೂ ಇದೇ ತೊಡಕುಗಳು ಸಾಕಷ್ಟಿವೆ .ಮಾಲೀಕರ ಹೆಸರಿಲ್ಲದೆ ಯಾರು ಕೂಡ ಇ-ಸ್ವತ್ತು ಕೊಡುವುದಕ್ಕೆ ಬರುವುದಿಲ್ಲ ಕಾನೂನಿ ಚೌಕಟ್ಟಿನಲ್ಲಿಯೇ ಇ-ಸ್ವತ್ತ ನ್ನು ಅಧಿಕಾರಿಗಳು ನೀಡಬೇಕಾಗುತ್ತದೆ . ಜಗಳೂರು ಪಟ್ಟಣ ಪಂಚಾಯಿತಿಗೆ ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯ ಬೆಟ್ಟದ ತುದಿಯಲ್ಲಿದೆ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾದಂತೆ ಪಟ್ಟಣ ಬೆಳೆಯುತ್ತದೆ ಎಂದು ಸಾರ್ವಜನಿಕರಿಗೆ ಮನದಟ್ಟುಮಾಡಿದರು. ಶೀಘ್ರವೇ ಸಾರ್ವಜನಿಕರ ಹಿತದೃಷ್ಟಿ ಯಿಂದ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ತೆರಿಗೆ ಹಣವನ್ನು ಕಟ್ಡುವಂತಹ ಕೊಠಡಿಯನ್ನು ಮಾಡಿ ಜನರಿಗೆ ತೊಂದರೆ ಯನ್ನು ತಪ್ಪಿಸಿ ಎಂದರು.ಮುಖ್ಯಾಧಿಕಾರಿ ಲೋಕ್ಯನಾಯ್ಕ ಮಾತನಾಡಿ ತಮ್ಮ ಮನೆ ಆಸ್ತಿ ಮತ್ತು ಮೂಲಭೂತ ಸಮಸ್ಯೆಗಳನ್ನು ಹೇಳುತ್ತಾರೆ ಅಂತವರಿಗೆ ಪರಿಹರಿಸುವಂತಹ ಕಾರ್ಯಕ್ರಮವೇ ಮನೆ ಮನೆಗೆ ಪಟ್ಟಣ ಪಂಚಾಯಿತಿ ಎಂಬ ವಿನೂತನ ಕಾರ್ಯಕ್ರಮವಾಗಿದೆ. ಇ-ಸ್ವತ್ತಿನ ಬಗ್ಗೆ ತಪ್ಪು ಅಭಿಪ್ರಾಯ ಬೇಡ ಸಾರ್ವಜನಿಕರು ಮಾಲೀಕರು ತಮ್ಮ ಸ್ವತ್ತಿನ ಮೂಲ ದಾಖಲೆಗಳನ್ನು ಇಟ್ಟು ಕೊಳ್ಳಬೇಕೆಂದರು