ಅ.೫-೬ ರಂದು ಪುನೀತ್ ರಾಜಕುಮಾರ್ ಕಪ್ ರಾಷ್ಟ್ರೀಯ ಚದುರಂಗ ಸ್ಪರ್ಧೆ
ಸಂಜೆವಾಣಿ ವಾರ್ತೆ
ದಾವಣಗೆರೆ. ಸೆ.೨೫; ದಾವಣಗೆರೆ ಚೆಸ್ ಕ್ಲಬ್ ವತಿಯಿಂದ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಇವರ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವ ಹಾಗೂ ಪುನಿತ್ ರಾಜಕುಮಾರ್ ಅವರ ಸವಿನೆನಪಿಗಾಗಿ ಅಕ್ಟೋಬರ್ 05 ಮತ್ತು 06 ರಂದು ನಗರದ ಶಾಮನೂರು ರಸ್ತೆಯಲ್ಲಿರುವ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಪ್ರಥಮ ಬಾರಿಗೆ ರಾಷ್ಟ್ರಮಟ್ಟದ ಫಿಡೇ ರೇಟಿಂಗ್ ಓಪನ್ ರ್ಯಾಪಿಡ್-‘ಪುನಿತ್ ರಾಜಕುಮಾರ್ ಕಪ್’ ಸೀಸನ್-3 ಚದುರಂಗ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ದಾವಣಗೆರೆ ಚೆಸ್ ಕ್ಲಬ್ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಪಂದ್ಯಾವಳಿಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸುಮಾರು 400 ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸುವರು. 09 ಸುತ್ತುಗಳಲ್ಲಿ ಪಂದ್ಯಾವಳಿ ನಡೆಯಲಿದ್ದು, ವಿಜೇತರಿಗೆ ಒಟ್ಟು ರೂ.2  ಲಕ್ಷ ರೂ ಬಹುಮಾನ ಮೊತ್ತ ಇದ್ದು ಜೊತೆಗೆ 200 ಟ್ರೋಫಿಗಳನ್ನು ವಿತರಿಸಲಾಗುವುದು ಎಂದರು.ಅ.೫ ರಂದು‌ ಬೆಳಗ್ಗೆ ೧೦ ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ  ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಸಂಸದರಾದ ಶ್ರೀಮತಿ ಡಾ. ಪ್ರಭಾ ಮಲ್ಲಿಕಾರ್ಜುನ್  ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ದಾವಣಗೆರೆ ಚೆಸ್ ಕ್ಲಬ್ ಅಧ್ಯಕ್ಷರಾದ ದಿನೇಶ್ ಕೆ. ಶೆಟ್ಟಿ  ವಹಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸ್ಟೇಟ್ ಚೆಸ್ ಅಸೋಸಿಯೇಷನ್ ಸಿ.ಇ.ಓ. ಅರವಿಂದ ಶಾಸ್ತ್ರಿ, ಆನಂದಪ್ಪ, ಕೆ.ಜಿ. ಶಿವಕುಮಾರ್, ಅಯೂಬ್ ಪೈಲ್ವಾನ್,  ಪಾಲಿಕೆ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಎ. ನಾಗರಾಜ್, ಚಮನ್‌ಸಾಬ್, ಎ.ಬಿ. ರಹೀಂ, ಸುರಭಿ ಶಿವಮೂರ್ತಿ, ನಲ್ಲೂರು ರಾಘವೇಂದ್ರ, ಎಸ್. ಮಲ್ಲಿಕಾರ್ಜುನ್, ವೆಂಕಟೇಶ್ ನಾಯ್ಕ, ಆಗಮಿಸುವರು.ಪ್ರಥಮ ಬಹುಮಾನ ‘ಪುನಿತ್ ಪ್ರತಿಮೆ’ಯ ಟ್ರೋಫಿಯ ಜೊತೆಗೆ ರೂ.25,000, ನಗದು ಬಹುಮಾನ ನೀಡಲಾಗುವುದು.ದಾವಣಗೆರೆಯ ಉತ್ತಮ ಚದುರಂಗ ಆಟಗಾರರರಿಗೆ 20 ವಿಶೇಷ ಟ್ರೋಫಿಗಳನ್ನು ವಿತರಿಸಲಾಗುವುದುಸೆ.೬ ರಂದು ಸಂಜೆ 5 ಗಂಟೆಗೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಶಾಸಕರಾದ  ಡಾ. ಶಾಮನೂರು ಶಿವಶಂಕರಪ್ಪ  “ಪುನಿತ್ ರಾಜಕುಮಾರ್ ಕಪ್” ಪ್ರಶಸ್ತಿ ಪ್ರಧಾನ ಮಾಡಲಿದ್ದು, ಅಧ್ಯಕ್ಷತೆಯನ್ನು ದಾವಣಗೆರೆ ಚೆಸ್ ಕ್ಲಬ್ ಅಧ್ಯಕ್ಷರಾದ ದಿನೇಶ್ ಕೆ. ಶೆಟ್ಟಿ ಅವರು ವಹಿಸುವರು, ಮೇಯರ್ ವಿನಾಯಕ ಪೈಲ್ವಾನ್,  ಪಾಲಿಕೆ ಸದಸ್ಯರಾದ ಗಡಿಗುಡಾಳ್ಮಂಜುನಾಥ್, ಎ. ನಾಗರಾಜ್, ಹುಲ್ಲುಮನೆ ಗಣೇಶ್, ನಲ್ಲೂರು ರಾಘವೇಂದ್ರ, ಕಣ್ಣಾಳ್ಅಂಜಿನಪ್ಪ, ಸಾಗ‌ರ್ ಎಲ್.ಎಂ.ಹೆಚ್., ಶಿವರತನ್, ಪ್ರವೀಣ್ ಭೋವಿ, ಮಧು ಪವಾರ್,ರಾಜು ಭಂಡಾರಿ, ಶ್ರೀಕಾಂತ ಬಗರೆ ಹಾಗೂ ಪಂದ್ಯಾವಳಿಯ ಪ್ರಾಯೋಜಕರಾದ ಜೈನ್ಟ್ರಿನಿಟಿ ಕಾಲೇಜಿನ ಮುಖ್ಯಸ್ಥರಾದ ವಿಜಯ ಜೈನ್, ಮಂಗಳ ಜ್ಯೋತಿ ವಿದ್ಯಾಸಂಸ್ಥೆ ಜೆ.ಹೆಚ್. ಪಟೇಲ್ ಕಾಲೇಜಿನ ಮುಖ್ಯಸ್ಥರಾದ ಮುಸ್ತಫಾ ರವರು ಹಾಗೂ ಮಕಾಯ್ ಎ.ಪಿ.ಎಸ್. ದಾವಣಗೆರೆ ಡಿಸ್ಟ್ರಿಬ್ಯೂಟರ್ ಆದ ಶಿವಕುಮಾರ್ ಉಪಸ್ಥಿತರಿರುವರು.ಈ ಪಂದ್ಯಾವಳಿಯಲ್ಲಿ ಅಂತರಾಷ್ಟ್ರೀಯ ತೀರ್ಪುಗಾರರಾದ ಬಿ.ಹೆಚ್. ವಸಂತ್, ಪ್ರಮೋದ್‌ರಾಜ್ ಮೋರೆ, ಫಿಡೇ ತೀರ್ಪುಗಾರರಾದ ಬಸವರಾಜ ಎಂ. ಇವರುಗಳು ಆಗಮಿಸಲಿದ್ದಾರೆಂದರು.ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಯುವರಾಜ್,ಕರಿಬಸಪ್ಪ,ಪವನ್ ಕುಮಾರ್,ವೈ.ತರುಣ್,ಪ್ರತಾಪ್ ಕುಮಾರ್,ಶ್ರೀಕಾಂತ್ ಬಗೇರಾ ಉಪಸ್ಥಿತರಿದ್ದರು.