ವಚನಗಳು ಮಾನವ ಜನ್ಮ ಪಾವನಗೊಳಿಸುವ ದಾರಿದೀಪ:ಶಿಕ್ಷಕ ಎಸ್.ಟಿ. ಜೇವೂರ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.15:ಬಸವಾದಿ ಶರಣರ ವಚನಗಳು ಅಂತರಂಗ- ಬಹಿರಂಗ ಪರಿಶುದ್ಧಗೊಳಿಸಿ ಮಾನವ ಜನ್ಮ ಪಾವನಗೊಳಿಸುವ ದಾರಿ ದೀಪ ಎಂದು ನಿವೃತ್ತ ಶಿಕ್ಷಕ ಎಸ್.ಟಿ. ಜೇವೂರ ಹೇಳಿದರು.
ನಗರದ ಬಿಎಲ್‍ಡಿಈ ಹತ್ತಿರ ಆಶ್ರಮ ರಸ್ತೆಯ ಅವರ ನಿವಾಸದಲ್ಲಿ ಗುರುವಾರ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರ ಭಾವಚಿತ್ರಕ್ಕೆ ವಚನ ಸಾಹಿತ್ಯ ಗ್ರಂಥಗಳಿಗೆ ಪುμÁ್ಪರ್ಚನೆಗೈದು ಮಾತನಾಡಿದ ಅವರು, ಮಾನವ ಮೂರು ಮಲತ್ರಯಗಳನ್ನು ಕಳೆದು,ಅರಿಷಡ್ವರ್ಗಳ ಮೀರಿ, ಪಂಚಾಚಾರ, ಷಟಸ್ಥಲ, ಅμÁ್ಟವರಣ ಮೂಲಕ ಶರಣ ತತ್ವ ಪಾಲಿಸಿದರೆ ಬದುಕು ಹಸನಾಗಿಸಲು ಸಾಧ್ಯ ಎಂದರು.
ಶರಣ ಎಂ.ಎಸ್. ಹಾಲಳ್ಳಿ ಅವರು ಮಾತನಾಡಿ, ವಚನ ಸಾಹಿತ್ಯದ ತತ್ವ ಬಹಳ ಮೌಲಿಕವಾಗಿದ್ದು, ವಿಶ್ವ ಸಾಹಿತ್ಯಕ್ಕೆ ಬಸವಾದಿ ಶರಣರು ಬಹುದೊಡ್ಡ ಕೊಡುಗೆ ನೀಡಿದ್ದಾರೆ. ವಿಶ್ವದ ಎಲ್ಲ ಭಾμÉಗಳಿಗೆ ವಚನ ಸಾಹಿತ್ಯ ಅನುವಾದಗೊಂಡರೆ ಅವುಗಳ ಅನುμÁ್ಠನದಿಂದ ಜಗತ್ತಿನಲ್ಲಿ ಸುಖ, ಶಾಂತಿ ನೆಮ್ಮದಿ ನೆಲೆಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ದಾನೇಶ್ವರಿ ಜೇವೂರ ಅವರು ವಚನ ಗಾಯನ ಪಠಿಸಿದರು. ವಿ.ಎಸ್ ತೇಲಿ, ಎಸ್.ಎಸ್.ಕೊಕಟನೂರ, ನ್ಯಾಯವಾದಿ ದಾನೇಶ ಅವಟಿ ಮಾತನಾಡಿದರು.
ಮಹಾಂತೇಶ ಜೆ.ಎಸ್. ಸ್ವಾಗತಿಸಿ, ನಿರೂಪಿಸಿದರು. ಮಂಜುಳಾ ವಂದಿಸಿದರು.