ಸುಖ ಜೀವನಕ್ಕೆ ಆಹಾರ ಆರೋಗ್ಯ ಆಧ್ಯಾತ್ಮ ಮುಖ್ಯ

ಸಂಜೆವಾಣಿ ವಾರ್ತೆ
ಶಿವಮೊಗ್ಗ-ಜೂ.೧೫; ವ್ಯಕ್ತಿತ್ವ ವಿಕಾಸಕ್ಕೆ ಧರ್ಮ ಮತ್ತು ಆಧ್ಯಾತ್ಮದ ಕೊಡುಗೆ ಅಪಾರ. ಮನುಷ್ಯ ಯಂತ್ರದಂತೆ ದುಡಿದರೂ ಜೀವನದಲ್ಲಿ ಶಾಂತಿ ತೃಪ್ತಿಯಿಲ್ಲ. ಸುಖದ ಬದುಕಿಗೆ ಆಹಾರ ಆರೋಗ್ಯ ಮತ್ತು ಆಧ್ಯಾತ್ಮ ಮುಖ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.   ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಐಟಿಐ ಕಾಲೇಜ ಆವರಣದಲ್ಲಿ ಜರುಗಿದ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಹಾಗೂ ಐಟಿಐ ಕಾಲೇಜಿನ 30ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಶ್ರಮದ ಬೆವರಿನ ಫಲ ಶಾಶ್ವತ ಮತ್ತು ಸುಖದಾಯಕ. ಶ್ರಮವಿಲ್ಲದೇ ಬಂದ ಸಂಪತ್ತು ಬಹು ಕಾಲ ಉಳಿಯಲಾರದು. ಸುಖ ಸಮೃದ್ಧಿಗಳು ಬೆಳೆದಂತೆ ಸತ್ಕೃತಿ ಸಂಸ್ಕೃತಿ ಬೆಳೆಯಬೇಕು. ವಿದ್ಯಾ ಬುದ್ಧಿ ಬೆಳೆಯುತ್ತಿದ್ದರೂ ಹೃದಯ ಪರಿವರ್ತನೆ ಇಲ್ಲದಿರುವುದನ್ನು ಕಾಣುತ್ತೇವೆ. ಬೆಟ್ಟದಷ್ಟು ಕಷ್ಟಗಳು ಬಂದರೂ ಅಚಲವಾಗಿರುವ ಗಟ್ಟಿತನ ಬೇಕು. ವೀರಶೈವ ಧರ್ಮ ಸಂವಿಧಾನಕ್ಕೆ ವಿಶ್ವ ಬಂಧುತ್ವದ ಆದರ್ಶ ಮೌಲ್ಯ ತಂದಿತ್ತವರು ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು. ಅವರು ಬೋಧಿಸಿದ ಶಿವಾದ್ವೆöÊತ ತತ್ವ ಸಿದ್ಧಾಂತದಲ್ಲಿ ಏನೆಲ್ಲವೂ ಅಡಗಿದೆ. ಯುಗ ಯುಗಗಳ ಇತಿಹಾಸವುಳ್ಳ ಪಂಚಾಚಾರ್ಯರು ಜಾತಿ ಮತಗಳ ಗಡಿ ಮೀರಿ ಭಾವೈಕ್ಯತೆ ಮತ್ತು ಸಾಮರಸ್ಯ ಬದುಕಿಗೆ ಶ್ರೀಕಾರ ಹಾಕಿದ ಆಚಾರ್ಯ ಶ್ರೇಷ್ಠರು. ಅಂಥ ಮಹಿಮಾನ್ವಿತರ ಯುಗಮಾನೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಸಂಸ್ಥೆಯ ಸಂಸ್ಥಾಪಕರಾದ ವಿಘ್ನೇಶ್ವರಯ್ಯ ಸೋಲಾಪುರ ಅವರ ಪರಿಶ್ರಮದ ಸಾಧನೆ ಬಹು ದೊಡ್ಡದು. ಶ್ರೀ ಜಗದ್ಗುರು ಪಂಚಾಚಾರ್ಯರ ಹೆಸರಿನಲ್ಲಿ ಮೊಟ್ಟ ಮೊದಲು ಕೈಗಾರಿಕಾ ಕೇಂದ್ರ ಸ್ಥಾಪಿಸಿ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಆಚರಿಸಿಕೊಂಡು ಬರುತ್ತಿರುವುದು ಇನ್ನಿತರರಿಗೆ ಮಾದರಿಯಾಗಿದೆ ಎಂದರು.ವೀರಶೈವ ಸಮಾಜದ ಧುರೀಣ ಎನ್.ಜೆ.ರಾಜಶೇಖರ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಅರಿವಿನ ಆದರ್ಶ ಬದುಕು ನಮ್ಮದಾಗಬೇಕು. ಕಾಯಕವೇ ಕಳಾಚೈತನ್ಯವಾಗಿ ಜೀವ ಜಗತ್ತಿನ ಉನ್ನತಿಗೆ ಸ್ಫೂರ್ತಿಯಾಗಿದೆ. ಆಚಾರ್ಯರು ತೋರಿದ ಸತ್ಪಥದಲ್ಲಿ ಮುನ್ನಡೆದು ಭಾರತೀಯ ಸಂಸ್ಕೃತಿ ಬೆಳೆಸಬೇಕಾಗಿದೆ ಎಂದರು. ಶ್ರೀ ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷಎಸ್.ಎಸ್.ಜ್ಯೋತಿಪ್ರಕಾಶ ಮಾತನಾಡಿ ಶಿವಮೊಗ್ಗದ ಹರಕೆರೆಯಲ್ಲಿ ನಿರ್ಮಾಣಗೊಂಡಿರುವ ಶ್ರೀ ರಂಭಾಪುರಿ ಜಗದ್ಗುರುಗಳ ವಾಸ್ತವ್ಯದ ಗುರುಭವನದ ಉದ್ಘಾಟನೆ ಜುಲೈ 3ಂದು ಉದ್ಘಾಟನೆಗೊಳ್ಳಲಿದೆ. ಈ ಸಂಬAಧವಾಗಿ ಜೂನ್ 20ರಂದು ಪೂರ್ವಭಾವಿ ಸಭೆ ನಡೆಯಲಿದೆ ಎಂದರು.