ನಮ್ಮ ದೇಶಿ ಸಂಸ್ಕøತಿ ಉಳಿಸಿ ಬೆಳೆಸಿ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.15:ನಗರ ಹೊರವಲಯದ ಹಿಟ್ನಳ್ಳಿಯ ಕೃಷಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಸಾಂಪ್ರದಾಯಕ ದಿನಾಚಾರಣೆಯನ್ನು ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಶಿಕ್ಷಕರು ಸಾಂಪ್ರದಾಯಿಕ ಉಡುಗೆ-ತೊಡುಗೆ ತೊಟ್ಟು ವಿಶಿಷ್ಟವಾಗಿ ಹಾಗೂ ವಿಭಿನ್ನವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಡೀನ್ ಡಾ. ಎ. ಭೀಮಪ್ಪ ಮಾತನಾಡಿ, ನಮ್ಮ ದೇಶದ ಸಂಸ್ಕøತಿ, ಆಚಾರ-ವಿಚಾರಗಳಿಗೆ ಮಹತ್ವವಿದೆ. ಇಂದು ಪಾಶ್ಚಾತ್ಯ ಸಂಸ್ಕøತಿಗೆ ಯುವಕ-ಯುವತಿಯರು ಮಾರು ಹೋಗುತ್ತಿರುವುದು ವಿಪರ್ಯಾಸ. ನಮ್ಮ ಸಂಸ್ಕøತಿ ಪರಂಪರೆಯನ್ನು ಉಳಿಸುವ ಜವಾಬ್ದಾರಿ ನಮ್ಮದು. ಇಂತಹ ದಿನಾಚರಣೆ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ಭಾರತ ದೇಶ ವಿಭಿನ್ನ ಸಂಸ್ಕøತಿಯ ದೇಶ. ದೇಶದ 31 ರಾಜ್ಯಗಳಲ್ಲಿ ವಿವಿಧ ಭಾಷೆ, ಸಂಸ್ಕøತಿ ಇದೆ. ಇದು ಜಗತ್ತಿನ ಯಾವುದೇ ಭಾಗದಲ್ಲಿಯೂ ಕಂಡು ಬರುವುದಿಲ್ಲ ಎಂದು ಹೇಳುತ್ತಾ, ನಮ್ಮ ದೇಶ ಕೃಷಿ ಪ್ರಧಾನವಾದ ದೇಶ. ಕೃಷಿಯನ್ನು ನಂಬಿ ದೇಶಕ್ಕೆ ಅನ್ನ ನೀಡುವ ರೈತರ ಅಭ್ಯುದಯಕ್ಕಾಗಿ ಕೃಷಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಾಂಪ್ರದಾಯಕವಾಗಿ ರೈತ ಹಾಗೂ ರೈತ ಮಹಿಳೆಯರಂತೆ ಉಡುಗೆ-ತೊಡುಗೆ ತೊಟ್ಟು ವಿಶೇಷ ದಿನ ಆಚರಿಸುತ್ತಿರುವುದು ಸಂತೋಷವನ್ನು ಇಮ್ಮಡಿಗೊಳಿಸಿದೆ ಎಂದರು.
ವಿದ್ಯಾರ್ಥಿ ಸಂಘದ ನಾಯಕರಾದ ವಿಕ್ರಮ ತುಂಬಗಿ, ರಿಹಾನ್ ಮಲ್ಲಿಕ ಹಳ್ಳೂರ ಮಾತನಾಡಿ, ಇಂದು ನಮ್ಮ ಕೃಷಿ ಕಾಲೇಜಿನಲ್ಲಿ ಹಬ್ಬದ ವಾತಾವರಣವಿದೆ. ಏಕೆಂದರೆ ಎಲ್ಲ ವಿದ್ಯಾರ್ಥಿಗಳು ಬಿಳಿ ಶರ್ಟ, ಬಿಳಿ ಪಂಚೆ, ಕೆಂಪು ಮತ್ತು ಕರಿ ಬಣ್ಣದ ಶರ್ಟ ಪ್ಯಾಂಟ್ ತೊಟ್ಟು ಬಂದಿದ್ದೇವೆ. ನಮಗೆಲ್ಲ ನಮ್ಮ ಶಿಕ್ಷಕ ಮತ್ತು ಶಿಕ್ಷಕಿಯರ ಮುಂದೆ ಪೋಷಾಕು ತೊಟ್ಟು ಸಂಭ್ರಮಿಸುತ್ತಿರುವುದು ಎಲ್ಲರ ಸಂತೋಷ ಹೆಚ್ಚಿಸಿದೆ ಎಂದರು.
ವಿದ್ಯಾರ್ಥಿನಿಯರಾದ ಪ್ರಿಯಾಂಕ ಆನೆಕಿವಿ, ಲಕ್ಷ್ಮೀ ಬಳ್ಳೂರ, ಅಂಕಿತಾ ಬೆಳ್ಳೆಹಾರ ಮಾತನಾಡಿ, ದಿನನಿತ್ಯ ಕಾಲೇಜಿಗೆ ಚೂಡಿದಾರ ಹಾಕಿಕೊಂಡು ಬರುತ್ತಿದ್ದೆವು. ಆದರೆ ಇಂದು ಭಾರತೀಯ ಸಂಸ್ಕøತಿ ಬಿಂಬಿಸುವ ಸೀರೆ, ಕುಪ್ಪಸ ತೊಟ್ಟು ಬಂದಿರುತ್ತೇವೆ. ಈ ಸಂದರ್ಭದಲ್ಲಿ ನಾವೆಲ್ಲ ನಮ್ಮ ಭಾರತೀಯ ಸಂಸ್ಕøತಿಯನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಆದ್ಯ ಕರ್ತವ್ಯವೆಂದೇ ಭಾವಿಸುತ್ತೇವೆ. ಇನ್ನು ಮುಂದೆ ವಾರದಲ್ಲಿ ಒಂದು ದಿನ ಸಾಂಪ್ರದಾಯಕ ಉಡುಗೆ ತೊಟ್ಟು ಬರುತ್ತೇವೆಂದು ಹರ್ಷದಿಂದ ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಡಾ. ಎನ್. ಡಿ. ಸುನೀತಾ, ಡಾ. ಮಹಾಂತೇಶ ತೆಗ್ಗಿ, ಡಾ. ಎಸ್. ಜಿ. ಅಸ್ಕಿ, ಡಾ. ಎಸ್. ಹೆಚ್. ಗುತ್ತರಗಿ, ಡಾ. ರಮೇಶ ಬೀರಗೆ, ಡಾ. ಸಂಗೀತಾ ಜಾದವ, ಡಾ. ಸಾವಿತ್ರಿ ಪಾಟೀಲ, ಡಾ. ಬಂಗಾರೆಮ್ಮ ಒಡೆಯರ, ಡಾ. ಸಿದ್ದರಾಮ ಪಾಟೀಲ, ಡಾ. ಅಶ್ವಿನಿ ಬೆಳುಂಡಗಿ, ವಿದ್ಯಾರ್ಥಿ ಮುಖಂಡರಾದ ವಿಕ್ರಮ ತುಂಬಗಿ, ರಿಹಾನ್ ಮಲ್ಲಿಕ ಹಳ್ಳೂರ, ರಕ್ಷಿತ ಬಟಕುರ್ಕಿ, ಮೌನೇಶ ಬಡಿಗೇರ, ರಾಕೇಶ ಬಡಿಗೇರ, ಪ್ರಿಯಾಂಕಾ ಆನೆಕಿವಿ, ಲಕ್ಷ್ಮೀ ಬಳ್ಳೂರ, ಅಂಕಿತಾ ಬೆಳ್ಳಿಹಾರ, ಶರಣಗೌಡ ಸೇರಿದಂತೆ ಕೃಷಿ ಕಾಲೇಜಿನ ಸಮಸ್ತ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.