ಗ್ಯಾರಂಟಿ ಯೋಜನೆಗಳನ್ನು ಪುನರ ಪರಿಶೀಲಿಸಿ: ಯಾಕಾಪೂರ ಮನವಿ
ಕಲಬುರಗಿ,ಜೂ.15- ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿಯಾಗುತ್ತಿದ್ದು, ಅಭವೃದ್ದಿ ಕೆಲಸಗಳು ಸ್ಥಗಿತಗೊಳ್ಳುತ್ತಿವೆ ಹೀಗಾಗಿ ಈ ಯೋಜನೆಯ ಕುರಿತು ಸರ್ಕಾರ ಪುನರ ಪರಿಶೀಲನೆ ಕೈಗೊಳ್ಳುವುದು ಸೂಕ್ತ ಎಂದು ಚಿಂಚೋಳಿಯ ಹಿರಿಯ ಸಾಮಾಜಿಕ ಕಾರ್ಯಕರ್ತ ರಮೇಶ ಯಾಕಾಪೂರ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಆರ್ಥಿಕವಾಗಿ ಹಿಂದುಳಿದ ಬಡ ಸಮುದಾಯದ ಬಿಪಿಎಲ್ ಪರಿತರ ಚೀಟಿದಾರರಿಗೆ ಮಾತ್ರ ಜಾರಿಗೆ ಮಾಡುವುದು ಸೂಕ್ತ ಇದರಿಂದ ಹೆಚ್ಚಿನ ಆರ್ಥಿಕ ಹೊರೆಯಿಂದ ಸ್ವಲ್ಪ ಸುದಾರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದಿರುವ ಅವರು, ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ತುಂಬುವ ಮೂಲಕ ನಿರುದ್ಯೋಗಿ ಸಮಸ್ಯೆಗಳಿಗೆ ಶಾಸ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.