ಜಂಟೀ ಸಮೀಕ್ಷೆಯ ನಂತರ ಪರಿಹಾರ ವಿತರಣೆಗೆ ಕ್ರಮ
ಬಸವಕಲ್ಯಾಣ:ಜೂ.15: ಭಾರೀ ಮಳೆಯಿಂದ ತಾಲೂಕಿನ ಕೊಹಿನೂg ಹೋಬಳಿ ವ್ಯಾಪ್ತಿಯಲ್ಲಿ ಕೆರೆಗಳು ಒಡೆದು ಹಾಳಾದ ಸ್ಥಳಗಳಿಗೆ ಬುಧವಾರ ಸಾಯಂಕಾಲ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಭೇಟಿ ನೀಡುವ ಮೂಲಕ ಪರಿಸೀಲಿಸಿದರು. ಶಾಸಕ ಶರಣು ಸಲಗರÀ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಅವರಿಗೆ ಸಾಥ್ ನೀಡಿದರು.
ಈ ಮೊದಲು ತಾಲೂಕಿನ ಖೇರ್ಡಾ (ಕೆ) ಲೇಂಗಟಿ ಬ್ರೀಜ್ ಪರಿಶೀಲಿಸಿದ ನಂತರ, ಅಟ್ಟೂರ, ಕೊಹಿನೂರ ಬ್ರೀಜ್, ಹಾಗೂ ಕೊಹಿನೂರ-ಬೋಸಗಾ ಮಧ್ಯೆ ಇರುವ ಬ್ರೀಜ್, ನಂತರ ವಡ್ಡರಗಾ ಬ್ರೀಜ್ ಭೇಟಿ ನೀಡಿ ಹಾಳಾದ ಬ್ರೀಜ್‍ಗಳ ಕುರಿತು ಪರಿಶೀಲನೆ ನಡೆಸಿದರು.
ಮಂಗಳವಾರ ಮಧ್ಯರಾತ್ರಿಯಿಂದ ಬುಧವಾರ ಬೆಳಗಿನ ಜಾವದ ವರೆಗೆ ಸುರಿದ ಭಾರೀ ಮಳೆಯಿಂದಾಗಿ ಅಟ್ಟೂರ ಹಾಗೂ ಕೊಹಿನೂರ- ಭೋಸಗಾ ಮಧ್ಯೆ ಇರುವ ಕೆರೆಗಳು ಒಡೆದು ರೈತರ ಜಮೀನುಗಳಿಗೆ ನೀರು ನುಗ್ಗಿ ಜಮೀನಿನಲ್ಲಿನ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದ್ದು ಪರಿಶೀಲನೆ ನಡೆಸಿದರು. ಈ ವೇಳೆ ರೈತರು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರ ಮುಂದೆ ತಮ್ಮ ಅಳಲು ತೋಡಿಕೊಂಡರು.
ಈ ವೇಳೆ ಜಿಲ್ಲಾಧಿಕಾರಿ ಮಾತನಾಡಿ, ಎನ್‍ಡಿಆರ್‍ಎಫ್ ಗೈಡ್‍ಲೈನ್ಸ್ ಪ್ರಕಾರ ಮಣ್ಣು ಕೊಚ್ಚಿಕೊಂಡು ಹೋಗಿದ್ದ ಜಾಗದಲ್ಲಿ ಹಾನಿಯಾದ ರೈತರಿಗೆ ಪ್ರತಿ ಹೆಕ್ಟರ್‍ನಂತೆ 18 ಸಾವಿರ ರೂ ಪರಿಹಾರ ನೀಡಲು ಅವಕಶವಿದೆ. ಅವರನ್ವಯ ಕಂದಾಯ ಹಾಗೂ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ಸಮೀಕ್ಷೆಯ ನಂತರ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗುವದು ಎಂದು ರೈತರಿಗೆ ತಿಳಿಸಿದರು.
ಜೊತೆಗೆ ಮಳೆಯಿಂದ ವಿವಿಧೆಡೆ ಹಾಳಾದ ಬ್ರೀಜ್‍ಗಳಿಗೆ ತಾತ್ಕಾಲಿಕವಾಗಿ ರಿಪೇರಿ ಕೈಗೊಂಡು ಸಂಚಾರಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳು ಮುಂದಾಗಬೇಕು ಹಾಗೂ ಪೂರ್ಣ ಪ್ರಮಾಣದಲ್ಲಿ ಬ್ರೀಜ್ ನಿರ್ಮಿಸಲು ಎಸ್ಟಿಮೆಂಟ್ ಕಳುಹಿಸಲು ಲೊಕೋಪಯೋಗಿ ಹಾಗೂ ಪಂಚಾಯತ್ ರಾಜ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಳೆಯಿಂದ ಕೊಹಿನೂರ ಹೋಬಳಿ ವ್ಯಾಪ್ತಿಯಲ್ಲಿ ಹಾಳಾದ ಮನೆಗಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸ್ಥಳದಲ್ಲಿದ್ದ ತಹಸೀಲ್ದಾರ ಶಾಂತಗೌಡ ಬಿರಾದಾರ ಅವರಿಗೆ ಸೂಚಿಸಿದರು.
ನಿಖರವಾದ ಜಂಟಿ ಸಮೀಕ್ಷೆ ನಡೆಸಿ ಪರಿಹರ ಒದಗಿಸಲು ಶಾಸಕ ಶರಣು ಸಲಗರ ಒತ್ತಾಯ
ಅಟ್ಟೂರ ಹಾಗೂ ಕೊಹಿನೂರ-ಭೋಸಗಾ ಮಧ್ಯೆ ಇರುವ ಕೆರೆಯ ಅಕ್ಕ-ಪಕ್ಕದಲ್ಲಿರುವ ಜಮೀನುಗಳಿಗೆ ನೀರು ನುಗ್ಗಿ ಜಮೀನುಗಳಲ್ಲಿನ ಫಲವತ್ತಾದ ಮಣ್ಣು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದ್ದರಿಂದ ರೈತರು ಅಂತಂತ್ರವಾಗಿದ್ದಾರೆ. ಹೀಗಾಗಿ ಅಂತಹ ಜಮೀನುಗಳಲ್ಲಿ ನಿಖರವಾದ ಜಂಟಿ ಸಮೀಕ್ಷೆ ನಡೆಸುವ ಮೂಲÀಕ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು ಜೊತೆಗೆ ಮಳೆ ನೀರಿನಿಂದಾಗಿ ಮುಚ್ಚಿದ ಬಾವಿಗಳಿಗೆ ಸರಕಾರ ಹೆಚ್ಚಿನ ಪರಿಹಾರ ವಿತರಿಸಿದರೆ ರೈತರಿಗೆ ಇನ್ನೂ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಕ್ರÀಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಶಾಸಕ ಶರಣು ಸಲಗರ ಒತ್ತಾಯಿಸಿದರು.