ನಿಜಲಿಂಗಪ್ಪನವರ ಮನೆ ಸಾರ್ವಜನಿಕ ವೀಕ್ಷಣೆಗೆ ತೆರೆದಿಡಲು‌ ಮನವಿ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜೂ.೧೫;: ಗಾಂಧೀಜಿಯವರು ಎರಡು ದಿನ ತಂಗಿದ ಹೆಚ್ಚಿನ ಛಾವಣಿಯ ಮನೆಗಳನ್ನೇ ಸ್ಮಾರಕವನ್ನಾಗಿ ಮಾಡಿರುವ ಈ ದೇಶದಲ್ಲಿ, ಗಾಂಧಿವಾದಿ, ಕರ್ನಾಟಕ ರತ್ನ, ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ, ನಾಡೋಜ ಪ್ರಶಸ್ತಿ ವಿಜೇತ, ದಿವಂಗತ ಶ್ರೀ. ಎಸ್. ನಿಜಲಿಂಗಪನವರು ಜೀವನಪರ್ಯಂತ ವಾಸವಿದ್ದ ಮನೆಯನ್ನು, ನಾವು ಸ್ಮಾರಕವನ್ನು ಆಗಿ ಮಾಡಿ, ಮುಂದಿನ ಜನಾಂಗಕ್ಕೆ ಅವರ ತತ್ವಸಿದ್ಧಾಂತಗಳು, ಸರಳತೆ, ಪ್ರಾಮಾಣಿಕತೆ, ಹೋರಾಟ, ನಾಯಕತ್ವ ಮೌಲ್ಯಗಳನ್ನ ತೋರಿಸಿಕೊಟ್ಟರೆ, ಇತಿಹಾಸ ಮಕ್ಕಳ ಮನಸ್ಸಿನಲ್ಲಿ ನೆಲೆಯೂರುತ್ತದೆ ಎಂದು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿಯವರು ಜಿಲ್ಲಾಡಳಿತಕ್ಕೆ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.ಹೇಗೆ ಗಾಂಧಿಯವರ ಸ್ಮಾರಕ ಭವನವನ್ನು ಸ್ಥಾಪಿಸಿ, ಅವರು ಬಳಸುತ್ತಿದ್ದ ಕನ್ನಡಕ, ಕಲಾಕೃತಿಗಳು, ಪುಸ್ತಕ, ಬಳಸುತ್ತಿದ್ದ ಖಾದಿ, ಚರಕವನ್ನು ಸಹ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಿ, ಅದನ್ನು ಭೇಟಿ ಮಾಡಿದ ವ್ಯಕ್ತಿಯು ಅವರ ಜೀವನ ಮತ್ತು ಸಮಯವನ್ನು ನೆನಪಿಸಿಕೊಳ್ಳುವ ಅವಕಾಶವನ್ನು ನೀಡುತ್ತದೆ. ಅದೇ ರೀತಿ ಚಿತ್ರದುರ್ಗದ ಸ್ವಾತಂತ್ರö್ಯ ಹೋರಾಟಗಾರರ ಬದುಕನ್ನ ಮುಂದಿನ ಜನಾಂಗಕ್ಕೆ ಪರಿಚಯಿಸಿ, ನಗರಕ್ಕೆ ಪ್ರವಾಸಿಗರು ಬಂದಾಗ, ಅವರು ಬದುಕು ಜನರನ್ನ ಬದಲಾಯಿಸಲು ಅನುಕೂಲವಾಗುವುದು ಎಂದರು. ಮನೆಯನ್ನ ಹೀಗೆ ಸ್ಮಾರಕ ಮಾಡದೇ ಬಹಳ ದಿವಸ ಹಾಗೇ ಬಿಟ್ಟರೆ ಅವರ ನಿವಾಸ ಹಾಳಾಗಬಹುದು ಅಥವಾ ಗುರುತಿಸಲಾಗದಂತೆ ಬದಲಾಗÀಬಹುದು, ಆದನ್ನ ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕು. ಮುಂದಿನ ಜನಾಂಗಕ್ಕೆ ಮಾದರಿಯನ್ನಾಗಿ ಮಾಡಲು ಚಿತ್ರದುರ್ಗ ಜಿಲ್ಲೆಗೆ ಒಂದು ಅವಕಾಶ. ಅದನ್ನ ಸರಿಯಾಗಿ ಬಳಸಿಕೊಳ್ಳಬೇಕು. ಬೇರೆ ಜಿಲ್ಲೆಯಾಗಿದ್ದರೆ, ಅದನ್ನ ಬೇರೆ ರೀತಿಯಲ್ಲೆ ಬೆಳೆಸುತ್ತಿದ್ದರು. ನಮ್ಮ ಜಿಲ್ಲೆಯವರು ನಿರಾಸಕ್ತಿಯನ್ನು ಪ್ರದರ್ಶಿಸುತ್ತಿರುವುದು ಒಳ್ಳಯದಲ್ಲ ಎಂದರು.