ದಾವಣಗೆರೆ; ಸ್ಕೌಟ್ಸ್- ಗೈಡ್ಸ್ ರಾಜ್ಯ ಉಪಾಧ್ಯಕ್ಷರ ಭೇಟಿ

ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೧೪; ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಎ.ಎನ್. ಮಹೇಶ್ ಅವರು ದಾವಣಗೆರೆ ಜಿಲ್ಲಾ ಸಂಸ್ಥೆಗೆ ಭೇಟಿ ನೀಡಿದರು.ಅವರನ್ನು ರಾಜ್ಯ ಸರ್ಕಾರ ಇತ್ತೀಚಿಗೆ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ಮೌಲ್ಯಮಾಪನ ಸಮಿತಿ ಅಧ್ಯಕ್ಷರಾಗಿ ನೇಮಿಸಿದ ಪ್ರಯುಕ್ತ ದಾವಣಗೆರೆ ಜಿಲ್ಲಾ ಸಂಸ್ಥೆ ವತಿಯಿಂದ ಜಿಲ್ಲಾ ಮುಖ್ಯ ಆಯುಕ್ತರಾದ ಮುರುಘರಾಜೇಂದ್ರ ಜೇ ಚಿಗಟೇರಿ  ಸನ್ಮಾನಿಸಿ ಗೌರವಿಸಿದರು . ಈ ಸಂದರ್ಭದಲ್ಲಿ  ಜಿಲ್ಲಾ ಸ್ಕೌಟ್ ಆಯುಕ್ತ ಎ ಪಿ ಷಡಕ್ಷರಪ್ಪ ಹಾಗೂ ಜಿಲ್ಲಾ ಸಹಾಯಕ ಆಯುಕ್ತರುಗಳಾದ ಎನ್. ಕೆ.ಕೊಟ್ರೇಶ್, ಶಂಕರ್ ನಾಯಕ್ ,  ಜಿಲ್ಲಾ ಕಾರ್ಯದರ್ಶಿ, ಎಂ ರತ್ನ, ಜಿಲ್ಲಾ ಸಹ ಕಾರ್ಯದರ್ಶಿ, ಸುಖವಾಣಿ  ಅಶ್ವಿನಿ ಎಸ್ ಜಿ ವಿ.  ಜೀಜಾಮಾತ ಶಾಲೆ ಮುಖ್ಯೋಪಾಧ್ಯಾಯರು  ಪ್ರಕಾಶ್ ಮತ್ತು   ಜಿಲ್ಲಾ ವಿಜ್ಞಾನ ಕಾರ್ಯದರ್ಶಿಗಳು,  ಶಿಕ್ಷಕರು, ಎಂ ಗುರುಸಿದ್ದಸ್ವಾಮಿ ಉಪಸ್ಥಿತರಿದ್ದರು.