ಅಂತರಾಷ್ಟೀಯ ಯೋಗ ದಿನದ ಅಂಗವಾಗಿ ತರಬೇತಿ ಮತ್ತು ಆಯುಷ್ ಪರಿಚಯ ಕಾರ್ಯಕ್ರಮ

ಸಂಜೆವಾಣಿ ವಾರ್ತೆ
ದಾವಣಗೆರೆ ಜೂ.೧೪; ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಹರಿಹರ ನಗರಸಭೆ ಹಾಗೂ ಆಯುಷ್ ಇಲಾಖೆಯ ಸಹಯೋಗದೊಂದಿಗೆ  ಸೇಂಟ್ ಮೇರಿ ಶಾಲೆಯ ಆವರಣದಲ್ಲಿ ಜಿಲ್ಲಾ  ಯೋಗ ತರಬೇತಿ ಹಾಗೂ ಆಯುಷ್ ಪರಿಚಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರದಲ್ಲಿ ಜಿಲ್ಲಾ ಆಯುಷ್ ಅಧಿಕಾರಿಯಾದ ಡಾ.ಯೋಗೇಂದ್ರ ಕುಮಾರ್ ಬಿ.ಯು  ಆಯುಷ್ ಇಲಾಖೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.ತಾಲ್ಲೂಕು ಸರ್ಕಾರಿ ಆಯುರ್ವೇದ ಆಸ್ಪತ್ರೆ ಉಪಮುಖ್ಯ ವೈದ್ಯಾಧಿಕಾರಿ ಡಾ. ಸುಚಿತ್ರ ಎಸ್.ಎಸ್. ಇವರು ವಿದ್ಯಾರ್ಥಿಗಳಿಗೆ ಜಂಕ್ ಫುಡ್ ನಿಂದಾಗುವ ಅಡ್ಡ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.ಹಿರಿಯ ವೈದ್ಯಾಧಿಕಾರಿ ಡಾ. ಸುರೇಶ್ ಕುಮಾರ್  ಬನ್ನಿ ಕೊಡು ಇವರು ದಿನನಿತ್ಯ ಯೋಗ ಮಾಡುವುದರ ಪ್ರಯೋಜನಗಳನ್ನು ವ್ಯಕ್ತಪಡಿಸಿದರು.  ಯೋಗ ತರಬೇತುದಾರರಾದ ಆನಂದ್ ವಿದ್ಯಾರ್ಥಿಗಳಿಗೆ ಯೋಗವನ್ನು ಮಾಡಿಸಿ ಅದರ ಲಾಭಗಳನ್ನು ತಿಳಿಸಿದರು.ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳು ಪ್ರಭಾಕರ್, ಅಶ್ವಿನಿ ಹಾಗೂ ಶೀಲಾ ಕುಮಾರಿ, ಮಾರ್ಟಿನಲ್ ಮತ್ತು ಮೇರಿ ಕ್ರಿಸ್ಟಿನ್ ಮತ್ತು ಮೆರಿಲ್ ಮತ್ತು   ಗೈಡ್ ಕ್ಯಾಪ್ಟನ್ ಫಿಲೋಮಿನಾ, ಎನ್.ಕೆ ಕೊಟ್ರೇಶ್ ಮತ್ತು ರಂಜಿತ, ಜ್ಯೋತಿ, ಶಿಕ್ಷಕ ,ಶಿಕ್ಷಕಿಯರು ಹಾಗೂ ಸುಮಾರು 1700 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.