ಮಹಿಳೆಯರ ನೆರವಿಗೆಸ್ವಧಾರ, ಉಜ್ವಲ ವಿಲೀನ, ಶಕ್ತಿ ಸದನವಾಗಿ ಕಾರ್ಯನಿರ್ವಹಣೆ
ಸಂಜೆವಾಣಿ ವಾರ್ತೆ
  ದಾವಣಗೆರೆ.ಜೂ.೧೪; ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಜಿಲ್ಲಾಡಳಿತ ಕಚೇರಿಯಲ್ಲಿ ಕೇಂದ್ರ ಸರ್ಕಾರದ ಮಿಷನ್ ಶಕ್ತಿ ಯೋಜನೆಯ ಮಾರ್ಗಸೂಚಿ ಅನ್ವಯ ಸ್ವಾಧಾರ ಗೃಹ ಹಾಗೂ ಉಜ್ವಲ ಕೇಂದ್ರಗನ್ನು ವಿಲೀಗೊಳಿಸಿ ಶಕ್ತಿ ಸದನ ಕೇಂದ್ರಗಳನ್ನಾಗಿ ಸರ್ಕಾರದಿಂದ ಅನುಷ್ಠಾನಗೊಳಿಸುವ ಸಂಬಂಧ ಜಿಲ್ಲಾ ಮಟ್ಟದ ಸಮಿತಿ ಸಭೆಯನ್ನು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಯವರ ಅಧ್ಯಕ್ಷತೆಯಲ್ಲಿ ನಡೆಯಿತು.ಈ ವೇಳೆ ಮಾತನಾಡಿ ಜಿಲ್ಲಾಧಿಕಾರಿಯವರು ಪ್ರಸ್ತುತ ದಾವಣಗೆರೆಯಲ್ಲಿ 2 ಸ್ವಾಧಾರ ಗೃಹ ಹಾಗೂ 1 ರಾಜ್ಯ ಮಹಿಳಾ ನಿಲಯ ಕಾರ್ಯನಿರ್ವಹಿಸುತ್ತಿದ್ದು.  ಪ್ರಸಕ್ತ ಸಾಲಿನಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯರು ಹಾಗೂ ಅನೈತಿಕ ಸಾಗಾಣಿಕೆಯಲ್ಲಿ ರಕ್ಷಿಸಲ್ಪಟ್ಟ ಮಹಿಳೆಯರಿಗೆ ಸೂಕ್ತ ಕಾನೂನು ನೆರವು, ವೈದ್ಯಕೀಯ ನೆರವು, ವೃತ್ತಿ ತರಬೇತಿ ನೀಡಿ ಅವರನ್ನು ಪುನರ್ವಸತಿಗೊಳಿಸಲು ಸರ್ಕಾರದ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಮುಖಾಂತರ ಕ್ರಮವಹಿಸಬೇಕಾಗಿರುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.ನೊಂದ ಮಹಿಳೆಯರೊಂದಿಗೆ ಮನೋಸಂವಾದ ನಡೆಸುವುದರ ಮುಖಾಂತರ ಸಾಂತ್ವನ ನೀಡಲು ಮನೋತಜ್ಞರನ್ನು ಹಾಗೂ ನುರಿತ ಸಮಾಲೋಚಕರೊಂದಿಗೆ ಸಂಪರ್ಕ ಇಟ್ಟುಕೊಂಡು ಮಹಿಳೆಯರ ಶ್ರೇಯಾಭಿವೃದ್ಧಿಗೆ ಕ್ರಮವಹಿಸಬೇಕೆಂದು ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸುರೇಶ್.ಬಿ.ಇಟ್ನಾಳ್, ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ  ಸದಸ್ಯ ಕಾರ್ಯದರ್ಶಿಗಳಾದ ಮಹಾವೀರ.ಮ.ಕರೆಣ್ಣ, ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ,  , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಕೋಟ್ರೇಶ್.ಜಿ,  ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಂಜುನಾಥ್ , ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾಘಟಕ ಹಾಗೂ ಲೀಡ್ ಬ್ಯಾಂಕ್ ವ್ಯವಸ್ಥಾಪಕರು  ಹಾಜರಿದ್ದರು.