ಬೆಳ್ಳೂಡಿ ಗ್ರಾಮದಲ್ಲಿ ಕಣ್ಣಿನ ತಪಾಸಣೆ ಶಿಬಿರ

ಸಂಜೆವಾಣಿ ವಾರ್ತೆ ಹರಿಹರ ಜೂ 14 ; ತಾಲೂಕಿನ   ಬೆಳ್ಳೂಡಿಯ  ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಿವಮೊಗ್ಗದ ಶಂಕರ್ ಕಣ್ಣಿನ ಆಸ್ಪತ್ರೆ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿದ್ದು ಶಿಬಿರದಲ್ಲಿ 50 ಫಲಾನುಭವಿಗಳು ಆಯ್ಕೆಯಾಗಿದ್ದಾರೆ.  ಈ ವೇಳೆ ವೈದ್ಯಾಧಿಕಾರಿಗಳು ಶಿಲ್ಪಾಜಿ ನಾಯಕ್  ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಉಮಣ್ಣ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್  ನೇತ್ರಾಧಿಕಾರಿಗಳು ರಘು ಕುಮಾರ್ ಆರೋಗ್ಯ ನಿರೀಕ್ಷಣಾಧಿಕಾರಿ ಪಂಚಾಕ್ಷರಿ ಅಜ್ಮತ್ ಪ್ರಾಥಮಿಕ ಸುರಕ್ಷಣಾಧಿಕಾರಿ ರೇಣುಕಮ್ಮ  ಸಿ ಎಚ್ ಓ ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.. ಪ್ರಾಥಮಿಕ ಆರೋಗ್ಯ ಕೇಂದ್ರ  ಬೆಳ್ಳೂಡಿ ಗ್ರಾಮಸ್ಥರು ಉಪಸ್ಥಿತರಿದ್ದರು