ಬೆಳ್ಳಿ ಮೂರ್ತಿ ಅನಾವರಣ
ಚನ್ನಮ್ಮನ ಕಿತ್ತೂರು,ಜೂ.14: ನಾವೆಲ್ಲರೂ ಬಸವಣ್ಣವರ ತತ್ವಗಳನ್ನು ಅರಿತರೆ ಜೀವನ ಸಾರ್ಥಕವಾಗುವುದರ ಜೊತೆಗೆ ನಿರುದ್ಯೋಗ ಬದುಕನ್ನು ಕಟ್ಟಿಕೊಳ್ಳಲು ಅನುಕೂಲಕರವಾಗುತ್ತದೆ ಎಂದು ಐಪಿಎಸ್ ಅಧಿಕಾರಿ ರವಿ ಚನ್ನನವರ ಹೇಳಿದರು.
ತಾಲೂಕಿನ ಹುಣಸಿಕಟ್ಟಿ ಗ್ರಾಮದ ರುದ್ರಸ್ವಾಮಿಗಳ ಹಳೇ ಮಠದಲ್ಲಿ ನಡೆದ ಬೆಳ್ಳಿ ಮೂರ್ತಿ ಅನಾವರಣ ಹಾಗೂ ಹುಣಸಿಕಟ್ಟಿ ಸಂಬ್ರಮ ಕಾರ್ಯಕ್ರಮದ ನಿಮಿತ್ಯ ನಡೆದ ಯುವ ಸಮಾವೇಶ ಹಾಗೂ ಸಮಾರೋಪ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದವರು. ಕಾಯಕವೇ ಕೈಲಾ¸ ಎಂದು À ಕೆಲಸ ಮಾಡಿದ ಜ್ಞಾನಿ ಬಸವಣ್ಣನವರು ನಾವು ಮಾಡುವ ಕೆಲಸದಲ್ಲಿ ನಮಗೆ ಕೀಳರಿಮೆ ಇರಬಾರದು ಎಂದರು.
ಸಾನಿಧ್ಯವಹಿಸಿ ಮಾತನಾಡಿದ ಚನ್ನಬಸವ ದೇವರು ಕಾಯಕ ನಿಷ್ಠೆ, ಪರಿಶ್ರಮಕ್ಕೆ ರವಿ ಚನ್ನಣ್ಣವರ ಯುವಕರಿಗೆ ಸ್ಪೂರ್ತಿಯಾಗಿದ್ದು ಹುಣಸಿಕಟ್ಟಿ ಸಂಭ್ರಮಕ್ಕೆ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ನಿರೀಕ್ಷಣೆಗೆ ಮೀರಿ ಸ್ಪಂದನೆ ನೀಡಿದ್ದಾರೆ. ಬರುವ ದಿನಗಳಲ್ಲಿ ಉತ್ತಮ ಧಾರ್ಮಿಕ ಮತ್ತು ಸಂಸ್ಕøತಿಕ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಯೋಜನೆ ಮಾಡಲು ಎಲ್ಲರ ಸಹಕಾರ ಅಗತ್ಯ ಎಂದರು.
ಈ ವೇಳೆ ಶಾಸಕ ಬಾಬಾಸಾಹೇಬ ಪಾಟೀಲ, ಮಾಜಿ ವಿ.ಪ.ಸದಸ್ಯ ಮಹಾಂತೇಶ ಕವಟಗಿಮಠ, ಶಂಕರ ಹೊಳಿ, ಚನ್ನಬಸಪ್ಪ ಮೊಕಾಶಿ, ಅಶೋಕ ಯರಗೊಪ್ಪ, ಆರ್.ಕೆ ಅಂಗಡಿ, ಮಹಾಂತೇಶ ಮತ್ತಿಕೊಪ್ಪ, ಸಿ.ಆರ್.ಪಾಟೀಲ, ಕೃಷಿ ಅಧಿಕಾರಿ ಪ್ರಭಾಕರ ಇತ್ನಾಳ, ಅಮೀತ ಕುಂಬೇಕರ, ಜ್ಯೋತಿಬಾ ಭರಮಪ್ಪನವರ, ರವಿಂದ್ರ ಗಡಾದ , ಉಮೇಶ ಪಾಟೀಲ, ಸೇರಿದಂತೆ ಸಾರ್ವಜನಿಕರಿದ್ದರು. ವಿವೇಕ ಕುರಗುಂದ ಸ್ವಾಗತಿಸಿ ನಿರೂಪಿಸಿದರು.