7ನೇ ವೇತನ ಆಯೋಗ ಜಾರಿ ವಿಳಂಬದ ವಿರುದ್ಧ ಕೈಗೊಳ್ಳುವ ಹೋರಾಟಕ್ಕೆ ಬೆಂಬಲ
ಕಲಬುರಗಿ,ಜೂ.14- ರಾಜ್ಯ ಸರಕಾರವು ಏಳನೆಯ ವೇತನ ಅಯೋಗದ ವರದಿ ಜಾರಿಯ ಮಾಡಲು ರಾಜ್ಯದ ಮುಖ್ಯಮಂತ್ರಿ ಅವರನ್ನು ಕರ್ನಾಟಕ ಸರಕಾರದ ಸಚಿವಾಲಯ ನೌಕರ ಸಂಘದ ಅಧ್ಯಕ್ಷರಾದ ರಮೇಶ ಸಂಗಾ ರವರ ಭೇಟಿ ಮಾಡಿ ಏಳನೆಯ ವೇತನ ಅಯೋಗದ ವರದಿ ಜಾರಿಗೊಳಿಸಲು ಮನವಿ ಮಾಡಿದ್ದು, ರಾಜ್ಯ ಸರಕಾರ ವಿಳಂಬ ಮಾಡುತ್ತಿರುವುದರಿಂದ ಸಚಿವಾಲಯ ನೌಕರ ಸಂಘ ಹೋರಾಟ ಕೈಗೊಳ್ಳುವ ಎಚ್ಚರಿಕೆ ನೀಡಿದ್ದು, ಸಂಗಾ ಅವರ ಹೋರಾಟಕ್ಕೆ ಕರವೇ,ಕಾವಲುಪಡೆ ರಾಜ್ಯ ಘಟಕ ಸಂಪೂರ್ಣವಾಗಿ ಬೆಂಬಲ ಘೋಷಣೆ ಮಾಡಲಾಗಿದೆ ಎಂದು ಕರವೇ, ಕಾವಲುಪಡೆ ಕಲ್ಯಾಣ ಕರ್ನಾಟಕ ಅಧ್ಯಕ್ಷರಾದ ಮಂಜುನಾಥ ನಾಲವಾರಕರ್ ಅವರು ತಳಿಸಿದ್ದಾರೆ.
ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಏಳನೇ ವೇತನ ಆಯೋಗದ ಶಿಫಾರಸ್ಸನ್ನು ಜಾರಿಗೆ ತರಲು ವಿಳಂಭ ಮಾಡಬಾರದು, ಸರ್ಕಾರಿ ನೌಕರರ ಹೋರಾಟಕ್ಕೆ ಇಳಿಯಲು ಅವಕಾಶ ನೀಡದೇ ತಕ್ಷಣವೇ ಜಾರಿಗೆ ತರುವಂತೆ ನಾಲವಾರಕರ್ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.