ಸಂಸದ ರಮೇಶ ಜಿಗಜಿಣಗಿಯವರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡುವಂತೆ ಆಗ್ರಹ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.14:ಸಂಸದ ರಮೇಶ ಜಿಗಜಿಣಗಿ ಅವರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಬೇಕು ಎಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಮುತ್ತಣ್ಣ ಸಾಸನೂರ ವಕೀಲರು ಕೇಂದ್ರ ಬಿಜೆಪಿ ವರಿಷ್ಠರಿಗೆ ಒತ್ತಾಯಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ದಲಿತ ನಾಯಕ ರಮೇಶ ಜಿಗಜಿಣಗಿಯವರು ಸತತ 7ನೇ ಬಾರಿ ಲೋಕಸಭಾ ಸಂಸದರಾಗಿ ಆಯ್ಕೆ ಆಗಿರುವದು ಸಂತಸವನ್ನುಂಟು ಮಾಡಿದೆ. ಅದೇ ರೀತಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಇಬ್ಬರು ದಲಿತ ಬಿಜೆಪಿ ನಾಯಕರು ಆಯ್ಕೆಯಾಗಿರುವದು ಹೆಮ್ಮೆಯ ವಿಷಯವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಮೇಶ ಜಿಗಜಿಣಗಿಯವರು ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಹಗಲಿರುಳು ಶ್ರಮವಿದೆ. ಅದೇ ರೀತಿ ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿಯು ಗಟ್ಟಿಯಾಗಿ ಉಳಿಯಬೇಕು ಹಾಗೂ ಬೆಳೆಯಲು ಜಿಗಜಿಣಗಿಯವರು ಪರಿಶ್ರಮ ಬಹಳಷ್ಟಿದ್ದು, ಜಿಗಜಿಣಗಿಯವರು ತಮ್ಮ ರಾಜಕೀಯ ಜೀವನದಲ್ಲಿ ಎಲ್ಲರೊಂದಿಗೆ ಸ್ನೇಹ ಬಾಂಧವ್ಯ ಇಟ್ಟುಕೊಂಡು ಸೋಲಿಲ್ಲದ ಸರ್ದಾರರಾಗಿದ್ದು, ಅವರು ರಾಜಕೀಯದಲ್ಲಿ ಅಜಾತಶತೃ ಎನಿಸಿಕೊಂಡವರು. ಇಂತಹ ಮುತ್ಸದ್ದಿ ನಾಯಕ ರಮೇಶ ಜಿಗಜಿಣಗಿಯವರು 18ನೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಸುಮಾರು 240 ಶೀಟುಗಳನ್ನು ಗೆಲ್ಲುವ ಮೂಲಕ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದರು.
ರಾಜಕೀಯ ಮುತ್ಸದ್ದಿಯಾಗಿರುವ ರಮೇಶ ಜಿಗಜಿಣಗಿಯವರು ರಾಜ್ಯದಲ್ಲಿ ಶಾಸಕರಾದ ಸಮಯದಲ್ಲಿ, ಗೃಹ ಸಚಿವರಾಗಿ, ಕಂದಾಯ ಸಚಿವರಾಗಿ, ಜವಳಿ ಸಚಿವರಾಗಿ, ಅಬಕಾರಿ ಸಚಿವರಾಗಿ, ಸಮಾಜ ಕಲ್ಯಾಣ ಸಚಿವರಾಗಿ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ ನಾಯಕನಿಗೆ ಇಲ್ಲಿಯವರೆಗೆ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ತಮ್ಮ ರಾಜಕೀಯ ಜೀವನವನ್ನು ಸಾಗಿಸಿದ್ದಾರೆ.
ಕಾರಣ ಈ ಬಾರಿಯ ಎನ್.ಡಿ.ಎ ನೇತೃತ್ವದ ಬಿಜೆಪಿ ಸರಕಾರದಲ್ಲಿ ಸಂಪುಟ ದರ್ಜೆಯ ಸಚಿವರಾಗಿ ದೇಶದ ಹಾಗೂ ವಿಜಯಪುರ ಜಿಲ್ಲೆಯ ಜನರಿಗಾಗಿ ಅಭಿವೃದ್ದಿ ಕೆಲಸ ಮಾಡಲು ಅವಕಾಶ ನೀಡಬೇಕೆಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ವತಿಯಿಂದ ವಿಜಯಪುರ ಜಿಲ್ಲೆಯ ಅಧ್ಯಕ್ಷ ಮುತ್ತಣ್ಣ ಸಾಸನೂರ (ವಕೀಲರು), ಹನಮಂತ ಆಹೇರಿ, ಅಶೋಕ ಮದಭಾವಿ, ಪುಂಡಲೀಕ ಮಾದರ, ಸಾಯಬಣ್ಣ ರಾಮರಥ ಪ್ರಕಟಣೆಯಲ್ಲಿ ಆಗ್ರಹಡಿಸಿದ್ದಾರೆ.