ಮಳೆ ನೀರಿಗೆ ಕೊಚ್ಚಿಕೊಂಡು ಹೋದ ಮಣ್ಣು ಕಂಗಾಲಾದ ರೈತ!
ಜಿ.ಪಿ. ಘೋರ್ಪಡೆ
ತಾಳಿಕೋಟೆ:ಜೂ.14: ಜೂನ್ ಸಾಥ್ ಎಲ್ಲ ರೈತರಿಗೆ ಖುಷಿಕೊಡುವಂತೆ ಈ ಭಾರಿ ಉತ್ತಮ ಮಳೆಯಾಗಿದೆ ಎಂದುಕೊಂಡರೆ ಒಂದೆಡೆ ಮಳೆಯ ಅವಾಂತರದಿಂದ ರೈತನ ಬಧುಕು ಕಿತ್ತುಕೊಂಡು ತಿನ್ನುವಂತೆ ಮಾಡಿದೆ ಕಳೆದ 10, 15 ದಿನಗಳಿಂದ ಸುರಿಯುತ್ತಿರುವ ಮಳೆಗೆ ಬಹುತೇಕ ಎಲ್ಲ ರೈತರ ಒಡ್ಡು ವರಿಗಳು ಒಡೆದು ಹೋಗಿವೆ ಇನ್ನೂ ಕೆಲವು ರೈತರ ಮಣ್ಣು ಸಂಪೂರ್ಣಕೊಚ್ಚಿಕೊಂಡು ಹೋಗಿ ಬಿತ್ತನೆಗೆ ಬಾರದ ಬರುಡಾದ ಭೂಮಿಯಂತಾಗಿದೆ.
ಮೂಕೀಹಾಳ ಗ್ರಾಂಪಂ ವ್ಯಾಪ್ತಿಯಲ್ಲಿ ಬರುವ ರೈತರಾದ ಎ.ಎ.ನಾಲಬಂದ ಎಂಬವರ ಜಮೀನಿನಲ್ಲಿಯ ಮಣ್ಣು ಎಲ್ಲವೂ ಸೋಗಲಿ ಹಳ್ಳದ ಪಾಲಾಗಿದೆ ಸುಮಾರು 20 ಕ್ಕೂ ಹೆಚ್ಚು ಜಮೀನುಗಳಿಂದ ಮಳೆಯ ನೀರು ಹರಿದು ಬರುತ್ತಿದ್ದು ಆದರೆ ಇಲ್ಲಿಯ ವರೆಗೂ ಯಾವುದೇ ರೀತಿಯ ಮಣ್ಣು ಕೊಚ್ಚಿಕೊಂಡು ಹೋಗಿದ್ದಿಲ್ಲಾ ಆದರೆ ನಾಲಬಂದ ಅವರ ಜಮೀನಿನಲ್ಲಿ ಜಲದಾರೆ ಯೋಜನೆಯಡಿ ಮುದ್ದೇಬಿಹಾಳ, ತಾಳಿಕೋಟೆ, ಸಿಂಧಗಿ ತಾಲೂಕಿಗೆ ಕುಡಿಯುವ ನೀರು ಒದಗಿಸುವ ಯೋಜನೆಯ ಬೃಹತ್ ಪೈಪಲೈನ ಕಾಮಗಾರಿ ನಡೆದಿದ್ದು ಸದರಿ ಪೈಪಲೈನ ಕಾಮಗಾರಿ ಪೈಪು ಹಾಕಿದ ನಂತರ ಅದಕ್ಕೆ ಮುಚ್ಚಳಿಕೆ ಮುಚ್ಚದ ಪರಿಣಾಮ ಮಳೆ ನೀರಿನ ಹೊಡೆತಕ್ಕೆ ಜಮೀನಿನಲ್ಲಿಯ ಎಲ್ಲ ಮಣ್ಣು ಪೈಪಲೈನ ಮೂಲಕ ಮೂಕೀಹಾಳ ಸೋಗಲಿ ಹಳ್ಳದ ಪಾಲಾಗಲು ಕಾರಣವಾಗಿದೆ ಎಂದು ರೈತ ಎ.ಎ.ನಾಲಬಂದ ಅವರು ಪತ್ರಿಕೆಗೆ ದೂರಿದ್ದಾರೆ.
ರೈತ ಎ.ಎ.ನಾಲಬಂದ ಅವರಿಗೆ ಸೇರಿದ 4 ಏಕರೆ ಫಲವತ್ತಾದ ಜಮೀನು ಸದ್ಯ ಬಿತ್ತನೆ ಬಾರದಂತಾಗಿದ್ದು ಇದಕ್ಕೆ ಕಾರಣರಾದ ಕಾಮಗಾರಿ ನಿರ್ವಹಣೆಯ ಜಿವ್ಹಿಪಿಆರ್ ಕಂಪನಿಯ ಗುತ್ತಿಗೆದಾರರು ಮಳೆಗಾಲ ಮುಗಿಯುವರೆಗೂ ಕೂಡಲೇ ಕಾಮಗಾರಿ ಸ್ಥಗಿತಗೊಳಿಸಬೇಕು ಮುಂದಿನ ರೈತರ ಜಮೀನುಗಳಿಗೆ ಆಗಬಹುದಾದ ಅನಾಹುತವನ್ನು ತಪ್ಪಿಸಲು ಜಿಲ್ಲಾಧಿಕಾರಿಗಳು ಕುದ್ದಾಗಿ ಜಮೀನುಗಳಿಗೆ ಬೆಟ್ಟಿ ನೀಡಿ ಈ ಕಾಮಗಾರಿಯಿಂದ ಆದ ಹಾನಿಗೆ ಪರಿಹಾರ ಒದಗಿಸುವಂತ ಕಾರ್ಯ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಕುಡಿಯುವ ನೀರು ಒದಗಿಸುವ ಜಲಧಾರೆ ಯೋಜನೆಯು ುತ್ತಮವಾಗಿದೆ ಆದರೆ ಗುತ್ತಿಗೆದಾರನ ಅಧಿಕಾರಿಗಳ ನಿರ್ಲಕ್ಷದಿಂದ ರೈತರ ಬಧುಕು ಬರಡಾಗುವಂತೆ ಮಾಡಿದೆ ಕೊಟ್ಯಾಂತರ ರೂ. ಖರ್ಚು ವೆಚ್ಚ ಮಾಡಿ ಮಾಡಲಾಗುತ್ತಿರುವ ಈ ಕಾಮಗಾರಿಗೆ ಮುನ್ನೇಚ್ಚರಿಕೆ ಇಲ್ಲದೇ ಪೈಪಲೈನ ಜೋಡಣೆ ಕಾರ್ಯ ಜಮೀನು ಸಂಪೂರ್ಣ ಹಾಳಾಗುವದಕ್ಕೆ ಕಾರಣವಾಗಿದ್ದು ಕೂಡಲೇ ಸಂಬಂದಿಸಿದ ಜಿವ್ಹಿಪಿಆರ್ ಕಂಪನಿಯ ಗುತ್ತಿಗೆದಾರನ ಮೇಲೆ ಹಾಗೂ ಇಂಜಿಯರ್ ಮತ್ತು ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ರೈತ ಎ.ಎ.ನಾಲಬಂದ ಅವರು ಒತ್ತಾಯಿಸಿದ್ದಾರೆ.
ಮಳೆಯ ಅವಾಂತರದಿಂದ ಕಳೆದ 10 ದಿನಗಳಿಂದ ಮೈದುಂಬಿ ಹರಿಯುತ್ತಿದ್ದ ಡೋಣಿ ನಧಿಯು ಸದ್ಯ ಅಲ್ಪ ಇಳಿಮುಖ ಕಂಡಿದ್ದರೂ ಕೂಡಾ ಮತ್ತೆ ಮಳೆಯಾದರೆ ನಧಿಯಲ್ಲಿ ನೀರು ವ್ಯಾಪಕವಾಗಿ ತುಂಬಿ ಬರುತ್ತದೆ ಈಗಾಗಲೇ ಈ ನಧಿಯ ನೀರಿನ ಹೊಡೆತಕ್ಕ ಅಕ್ಕಪಕ್ಕದ ಜಮೀನುಗಳಲ್ಲಿಯ ಮಣ್ಣು ಕೊಚ್ಚಿಕೊಂಡು ಹೋಗಿದೆ ಮತ್ತೇ ಮಳೆಯ ಅವಾಂತರ ಎಲ್ಲಿ ಸೃಷ್ಠಿಯಾಗುತ್ತದೆ ಎಂಬ ಭಯದವಾತಾವರಣ ರೈತರಲ್ಲಿ ಕಾಡುತ್ತಿದೆ.